‘ತಿರುಕ್ಕರಳ್’ ಎಂಬುದು ಲೇಖಕ ಪಾ.ಶ. ಶ್ರೀನಿವಾಸ ಅವರು ಕನ್ನಡದಲ್ಲಿ ಅನುವಾದಿಸಿದ ಕೃತಿ. ತಮಿಳಿನ ಸರ್ವಜ್ಞ ಎಂದೇ ಖ್ಯಾತಿ ತಿರುಕ್ಕರಳ್, ತನ್ನ ಸಾಹಿತ್ಯದ ಮೂಲಕ ಸಮಾಜವನ್ನು ವಿಡಂಬಿಸಿದ್ದು, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಹೇಗಿರಬೇಕು ಎಂದೂ ಸಲಹೆ ನೀಡಿದ್ದಾನೆ. ಮನುಷ್ಯರ ಸಣ್ಣತನಗಳನ್ನು ಟೀಕಿಸಿದ್ದಾನೆ. ಕನ್ನಡ ಸರ್ವಜ್ಞನಂತೆ ಕಿರಿದಾದ ಶಬ್ದಗಳಲ್ಲಿ ಹಿರಿದಾದ ಅರ್ಥವನ್ನು ತುಂಬಿ, ಯಾವುದೇ ಮುಲಾಜು ಇಲ್ಲದೇ ಸತ್ಯವನ್ನು ಪ್ರತಿಪಾದಿಸಿದ್ದಾನೆ. ಆತನ ಸಾಹಿತ್ಯದ ಸಾರವನ್ನು ಕನ್ನಡಿಗರಿಗೆ ಮನದಟ್ಟಾಗುವಂತೆ ಮಾಡುವಲ್ಲಿ ಈ ಕೃತಿ ಸಫಲವಾಗಿದೆ.
©2024 Book Brahma Private Limited.