‘ಹೂಬಾಣ’ ಬಿಲ್ಲಣನ ಪ್ರೇಮ ಪದ್ಯಗಳ ಕನ್ನಡಾನುವಾದ. ಬಿಲ್ಲಣನೆಂದರೆ ಉತ್ತರ ಕಾಶ್ಮೀರದಿಂದ ದಕ್ಷಿಣದ ಕನ್ನಡನಾಡಿಗೆ ಬೀಸಿಬಂದ ಚುಂಬಕ ಗಾಳಿ. ಸರಸ ಸಾಹಿತ್ಯದ ಸಾತ್ವಿಕ ಸಾರಸ್ವತ. ಉಳಿದ ಸಂಸ್ಕೃತ ಕವಿಗಳಂತೆ ‘ಶತಕ’ದ ಮೋಹಕ್ಕೆ ಬೀಳದೆ ಐವತ್ತು ಪದ್ಯಗಳಿಗೆ ಪ್ರಪಂಚವನೇ ಪರವಶಗೊಳಿಸಿದವನು. ಪರಮ ಪೋಲಿ ಕವಿತೆಗಳನ್ನು ಅದೆಷ್ಟು ನಯವಾಗಿ, ಹಿತವಾಗಿ, ಹೆಚ್ಚೆಚ್ಚು ಸರಸವಾಗಿ ಬರೆಯಬಹುದೆಂಬುದನು ನಮಗೆ ತೋರಿಸಿಕೊಟ್ಟ ಶೃಂಗಾರ ಕಾವ್ಯಗುರು.
ಕವಿಯೊಬ್ಬ ರಾಜಕುಮಾರಿಯೊಂದಿಗೆ ಕಳೆದ ಸರಸಗಳಿಗೆಗಳ ನೆನಪು ಈ ಐವತ್ತು ಪುಟ್ಟ ಪದ್ಯಗಳಲ್ಲಿ ಮೂಡಿಬಂದಿವೆ. ಅದು ನಿಜವೋ ಅಥವಾ ಕಲ್ಪನಾ ವಿಲಾಸವೋ ಯಾರಿಗೆ ಗೊತ್ತು. ನಮಗೆ ಬೇಕಾದ್ದು ಕಾವ್ಯ. ಆ ಕಾವ್ಯವನ್ನು ಕವಿ ಚಿದಂಬರ ನರೇಂದ್ರರು ಇಂಗ್ಲಿಷಿನ ಹಲವು ಆವೃತ್ತಿಗಳನ್ನು ಓದಿ, ಒಂದು ಇಡಿಯಾದ ಅನುವಾದದ ಮೂಲಕ ಸುಲಭವಾದ, ಅಪ್ಯಾಯಮಾನಕರವಾದ ಕನ್ನಡಕ್ಕೆ ಅನುವಾದಿಸಿದ್ದಾರೆ. ಮೊದಲ ಪುಟದ ಮೊದಲ ಪದ್ಯದಲ್ಲೇ ರೋಮಾಂಚನಕ್ಕೆ ಸಿಲುಕುವ ಓದುಗನು ಪ್ರತಿ ಪುಟದಲ್ಲೂ ಆಹಾ ಎನ್ನದೆ ವಿಧಿಯಿಲ್ಲ.
©2024 Book Brahma Private Limited.