ಅಕ್ಕ ನುಡಿಯುತ್ತಾಳೆ

Author : ಮೋಳಿ ವರ್ಗೀಸ್

Pages 80

₹ 70.00




Year of Publication: 2015
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಹೆಸರಾಂತ ಮಲಯಾಳಿ ಕವಿ ಕೆ. ಸಚ್ಚಿದಾನಂದನ್‌ ಅವರ ಕವಿತೆಗಳ ಅನುವಾದ ’ಅಕ್ಕ ನುಡಿಯುತ್ತಾಳೆ’ ಸಂಕಲನ. ಕೆ.ಸಚ್ಚಿದಾನಂದನ್ ಅವರ ಕವಿತೆಗಳನ್ನು ಮೋಳಿ ವರ್ಗೀಸ್ ಅವರು  ಮಲಯಾಳಂನಿಂದ ಕನ್ನಡಕ್ಕೆ ತಂದಿದ್ದಾರೆ. 1965 ರಿಂದ 2015ರವರೆಗಿನ ಅವಧಿಯಲ್ಲಿ ಸಚ್ಚಿದಾನಂದನ್ ಅವರು ಬರೆದ ಕವಿತೆಗಳಿಂದ ಆಯ್ದ ಕೆಲವು ಕಏತೆಗಳು ಈ ಗುಚ್ಚದಲ್ಲಿವೆ. ಬೇರೆಬೇರೆ ಕಾಲಘಟ್ಟಗಳಲ್ಲಿ ಸಚ್ಚಿದಾನಂದನ್‌ ಕವಿತೆ ಕಂಡ ಮಾರ್ಪಾಡುಗಳನ್ನು ಈ ಅನುವಾದ ಸಮಗ್ರವಾಗಿ ಪ್ರತಿನಿಧಿಸುತ್ತದೆ.

ಕವಿ ಸಚ್ಚಿದಾನಂದನ್ ಅವರು ’ನನ್ನ ಕವಿತೆಯ ವೈಯಕ್ತಿಕವೂ ಸಾಮಾಜಿಕವೂ ಆದ ಸ್ತರಗಳನ್ನೂ, ಲಯದ ಏರಿಳಿತಗಳನ್ನೂ, ದರ್ಶನವನ್ನೂ, ಪ್ರತಿಮಾ ಸೃಷ್ಟಿಯಲ್ಲಿನ ವೈವಿಧ್ಯಗಳನ್ನೂ ಈ ಅನುವಾದ ಒಳಗೊಂಡಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

About the Author

ಮೋಳಿ ವರ್ಗೀಸ್

ಮೋಳಿ ವರ್ಗೀಸ್- ಹುಟ್ಟಿದ್ದು ಕೇರಳದ ಕಣ್ಣೂರು ಜಿಲ್ಲೆಯ ಕೊಳಕ್ಕಾಡುವಿನಲ್ಲಿ. ಪಿಯುಸಿಯವರೆಗಿನ ವ್ಯಾಸಂಗವು ಕೇರಳದ ಹುಟ್ಟೂರಿನಲ್ಲೇ ಬಿ.ಎ.ಓದಿದ್ದು ಮೈಸೂರಿನ ಟರೇಷಿಯನ್ ಕಾಲೇಜಿನಲ್ಲಿ. ಮಾನಸಗಂಗೋತ್ರಿಯಲ್ಲಿ ಇಂಗ್ಲಿಷ್ ಎಂ.ಎ ಮಾಡಿದ್ದು, 1989ರಲ್ಲಿ. ಎಂಎಯಲ್ಲಿ ಸಹಪಾಠಿಯಾಗಿದ್ದ ಖ್ಯಾತ ಕತೆಗಾರ, ಅಂಕಣಕಾರ ಅಬ್ದುಲ್ ರಷೀದರೊಂದಿಗೆ ವಿವಾಹ. ಈಗ ಮೈಸೂರಿನ ಬಿ.ಎಡ್.ಕಾಲೇಜಿನಲ್ಲಿ ಇಂಗ್ಲಿಷ್ ಬೋಧಕರಾಗಿದ್ದಾರೆ. ಸಿರೀಸ್ ಮತ್ತು ಅಖಿಲ್ ಎಂಬ ಎರಡು ಮಕ್ಕಳೊಡನೆ ಇವರ ಸಂಸಾರ ಮೈಸೂರಿನಲ್ಲೇ ನೆಲೆಸಿದೆ. ಇವರು ಮಲಯಾಳಂನಿಂದ ಕನ್ನಡಕ್ಕೆ ತಂದ ವೈಕ್ಕಂ ಮಹಮ್ಮದ್ ಬಷೀರರ ಓರ್ಮೆಯುಡೆ ಅರೆಗಳ್ ಎಂಬ ಜೀವನ ಚರಿತ್ರೆಯ ಭಾಗಗಳು ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಸುಗತಕುಮಾರಿಯವರ ಮಲಯಾಳಂ ಕವಿತೆಯ ...

READ MORE

Related Books