ಆಧುನಿಕ ಇಂಗ್ಲಿಷ್ ಸಾಹಿತ್ಯ ಚರಿತ್ರೆಯಲ್ಲಿ 'ಸಾವಿತ್ರಿ’ ಅಸೀಮವಾದ ಮಹಾಕಾವ್ಯ ರಚನೆ ಎಂದು ಹೆಸರು ಗಳಿಸಿದೆ. ಇಲ್ಲಿ ಲೇಖಕರು ಅನುವಾದಕ್ಕೆ ಬಳಸಿರುವ ಕಾವ್ಯಭಾಷೆ ಹಳಗನ್ನಡ, ನಡುಗನ್ನಡ ಎರಡರ ಸಮ್ಮಿಶ್ರವಾಗಿದೆ. ಅನುವಾದದಲ್ಲಿ ಧೀರ ಗಂಭೀರವಾದ ವಾಣಿಯಿಂದ ಅಲಂಕೃತವಾಗಿದೆ. ಕಾವ್ಯತತ್ತ್ವ ಮತ್ತು ದರ್ಶನತತ್ತ್ವಗಳು ಒಂದರೊಡನೊಂದು ಕೈಹಿಡಿದು ಇಲ್ಲಿ ನಡೆದಿವೆ. ಮೂಲ ಇಂಗ್ಲಿಷ್ ಮಹಾಕಾವ್ಯದಲ್ಲಿ ಬರುವ ರೂಪಕ, ಪ್ರತಿಮೆ, ಸಂಕೇತಗಳು ಕನ್ನಡದಲ್ಲಿ ಸಮರ್ಥವಾಗಿ ಇಳಿದು ಬಂದಿವೆ. ಅಸಾಧಾರಣವಾದ ವ್ಯುತ್ಪತ್ತಿ, ಮೌಲಿಕ ಕಲ್ಪಕತೆ, ಸಾಂದ್ರವಾದ ವರ್ಣನೆ, ರಮ್ಯನೋಟ ಮತ್ತು ಸಾಧಾರಣವಾದ ದರ್ಶನದೃಷ್ಟಿಯಿಂದ ಶ್ರೀ ಅರವಿಂದರ ಸಾವಿತ್ರಿಯ ಓದು ಅನನ್ಯವಾದ ಅನುಭವವನ್ನು ಸಹೃದಯರಿಗೆ ನೀಡುತ್ತದೆ.
©2024 Book Brahma Private Limited.