‘ಮಧುಶಾಲೆ’ ಡಾ. ದೇವರಾಜು ಮಹಾರಾಜು ಅವರು ತೆಲುಗಿಗೆ ಅನುವಾದಿಸಿದ್ದ ಹಿಂದಿಯ ಪ್ರಸಿದ್ಧ ಸಾಹಿತಿ ಡಾ. ಹರಿವಂಶರಾಯ ಬಚ್ಚನ ಅವರ ಕವಿತೆಗಳ ಕನ್ನಡಾನುವಾದ. ಲೇಖಕ ಲಕ್ಕೂರು ಆನಂದ ತೆಲುಗಿನಿಂದ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅನುವಾದದ ಕುರಿತು ಬರೆಯುತ್ತಾ ‘ಈ ಹಿಂದೆ ಅನೇಕ ಕವಿಗಳನ್ನು ಕಾವ್ಯದ ಮೂಲಕವೇ ಕನ್ನಡ ಸಾಹಿತ್ಯ ಲೋಕಕ್ಕೆ ಅನುವಾದಿಸಿದ ನಂತರ, ಮತ್ತೆ ನನ್ನ ಕಣ್ಣು ಅನುವಾದದ ಕಡೆಗೆ ಹೊರಳಲಿಲ್ಲ, ಆ ಸಮಯದಲ್ಲಿ ಯಾದೃಚ್ಛಿಕವಾಗಿ ಮಧುಶಾಲೆ ನನ್ನನ್ನು ಆಕರ್ಷಿಸಿತು ಮಧುವನ್ನು ಇತಿವೃತ್ತವಾಗಿ ದೊಡ್ಡ ಕಾವ್ಯವನ್ನು ಓದುಗರಿಗೆ ಉಣಬಡಿಸಿದ ಹರಿವಂಶ್ ರಾಯ್ ಕುಡಿತಕ್ಕೆ ಗುಲಾಮನಾಗಲಿಲ್ಲ. ಮಧುಶಾಲೆಯನ್ನು ಬರೆಯುವ ಕಾಲಘಟ್ಟದಲ್ಲಿ ಆತನಿಗೆ ಮಧುವಿನ ರುಚಿಯೂ ಕೂಡ ತಿಳಿಯದೆಂಬ ವಿಷಯವನ್ನು ತಿಳಿದುಕೊಂಡ ಮೇಲೆ ಆತನ ಕುರಿತು ಒಂದು ಗೌರವ ಭಾವ ಉಂಟಾಯಿತು, ಅದಕ್ಕೆ ಅನುವಾದ ಮಾಡಲು ಮುಂದಾದೆ’ ಎನ್ನುತ್ತಾರೆ ಕವಿ ಲಕ್ಕೂರು ಆನಂದ. ಕನ್ನಡ ಸಾಹಿತ್ಯ ಲೋಕಕ್ಕೆ ಪದ್ಮಭೂಷಣ ಹರಿವಂಶ್ ರಾಯ್ ಅವರನ್ನು ಪರಿಚಯ ಮಾಡಿಸುವ ಸಲುವಾಗಿ ಮಾಡಿದ ಸಣ್ಣ ಪ್ರಯತ್ನವಿದು ಎನ್ನುತ್ತಾರೆ. ಹಿಂದಿಯಿಂದ ಇಂಗ್ಲಿಷಿಗೆ, ಇಂಗ್ಲಿಷಿನಿಂದ ತೆಲುಗಿಗೆ ನಂತರ ಕನ್ನಡಕ್ಕೆ ನೇರವಾಗಿ ಮಾಡಿದ ಅನುಸೃಜನೆಯೇ ಈ ಕೃತಿ.
©2025 Book Brahma Private Limited.