ಹಿಂದಿ ಹಾಗೂ ಉರ್ದು ಭಾಷಾ ಕವಿ ಗುಲ್ಜಾರರ ಆಯ್ದ ಕವನಗಳು ಹಾಗೂ ಗಜಲ್ ಗಳನ್ನು ಹಿರಿಯ ಲೇಖಕ ಲಕ್ಷ್ಮಿಕಾಂತ ಇಟ್ನಾಳ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಗುಲ್ಜಾರ ಸಾಹೇಬರು ಎಂದೇ ಜನಪ್ರಿಯ. ಇವರ ಉರ್ದು ಹಾಗೂ ಹಿಂದಿ ಹಾಡುಗಳು ರೋಮಾಂಚನದ ಭಾವಗಳನ್ನು ಹೊಂದಿವೆ ಮಾತ್ರವಲ್ಲ; ಅವು ಜೀವನ ತತ್ವವನ್ನೂ ಒಳಗೊಂಡಿವೆ. ಕವಿತೆಗಳನ್ನು ಬರೆಯುವ ಗೀಳು ಅವರನ್ನು ಫಾಲ್ಕೆ ಪ್ರಶಸ್ತಿ ಪಡೆಯುವಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಯಿತು ಎಂದರೆ ಅಚ್ಚರಿಯಲ್ಲ. ಇವರ ಕವಿತೆಗಳು ಸಾಮಾಜಿಕ ಹೊಣೆಗಾರಿಕೆಯನ್ನು ಸಮರ್ಥಿಸಿಕೊಳ್ಳುತ್ತವೆ. ನಿಸರ್ಗವನ್ನು ಪ್ರೀತಿಸುತ್ತವೆ. ಅದನ್ನು ಕಾಪಾಡಿಕೊಂಡು ಹೋಗಬೇಕು ಎನ್ನುವರದ ಎಚ್ಚರವನ್ನೂ ನೀಡುತ್ತವೆ.
©2025 Book Brahma Private Limited.