’ಮುಂದಡಿ’ ತೆಲುಗಿನ ಪ್ರಖ್ಯಾತ ಕವಿ ಅಡಿಗೋಪುಲ ವೆಂಕಟರತ್ನಂ ಅವರ ಕವಿತೆಗಳ ಕನ್ನಡ ಅನುವಾದ. ಸರಳ, ಸುಂದರ ಮತ್ತು ಅರ್ಥವತ್ತಾದ ಕವಿತ್ವದ ಮೂಲಕ ತೆಲುಗು ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿದವರು ಅಡಿಗೋಪುಲ, ಗಾಢವಾದ ಭಾವಾಭಿವ್ಯಕ್ತಿಯೊಂದಿಗೆ ಯಾವುದೇ ಆಡಂಬರವಿಲ್ಲದೆ, ಬದ್ಧತೆಯಿಂದ ಕಾವ್ಯ ಕಟ್ಟುತ್ತಿರುವ ಸಮಕಾಲೀನ ತೆಲುಗು ಕವಿಗಳಲ್ಲಿ ಇವರದು ಮುಂಚೂಣಿಯಲ್ಲಿರುವ ಹೆಸರು. ವೃತ್ತಿಯೆಡೆಗಿನ ಪ್ರಾಮಾಣಿಕತೆ, ಪ್ರವೃತ್ತಿಯೆಡೆಗಿನ ಅಭಿರುಚಿ, ಬದುಕಿನಡೆಗಿನ ಪ್ರೀತಿ ಇವರ ಸಾಹಿತ್ಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿವೆ.
©2025 Book Brahma Private Limited.