ವೈಚಾರಿಕ ನೆಲೆಯಲ್ಲಿ ಸಮಾಜದ ಊನಗಳನ್ನು ಪ್ರಶ್ನಿಸಿದ ತೆಲುಗಿನ ಮೊದಲ ಕವಿ ವೇಮನ. ಕನ್ನಡದ ಸರ್ವಜ್ಞನನಂತೆ, ಸಂತ ಶಿಶುನಾಳ ಶರೀಫರಂತೆ ಯಾವತ್ತೂ ಆತ ಜನರ ಮಧ್ಯದಿಂದಲೇ ಅರಳಿದವನು. ಮೇಲ್ಜಾತಿಯ ಬಲ, ರಾಜಾಶ್ರಯದ ಬೆಂಬಲ ಎರಡೂ ಇಲ್ಲದೆ ಬದುಕಿದ ಆತನ ವಚನಗಳು ಮೌಢ್ಯ, ಜಾತಿ ಪದ್ದತಿ, ಅಸಮಾನತೆ, ಅಸ್ಪೃಶ್ಯತೆಯನ್ನು ಕಟುವಾಗಿ ಟೀಕಿಸಿದವು.
ಆ ವಚನಗಳನ್ನು ಕನ್ನಡಿಗರೂ ಓದಲಿ ಎಂಬ ಸದುದ್ದೇಶದಿಂದ ಲಡಾಯಿ ಪ್ರಕಾಶನ ಪ್ರಕಟಿಸಿದೆ. ಕೃತಿಯ ಹೆಸರು ’ಉರಿಯ ನೆಳಲು’. ತೆಲುಗಿನ ಡಾ. ಎನ್. ಗೋಪಿ ಅವರು ಬರೆದ ಪುಸ್ತಕವನ್ನು ಹಿರಿಯ ಅನುವಾದಕ ಬಿ. ಸುಜ್ಞಾನ ಮೂರ್ತಿ ಕನ್ನಡೀಕರಿಸಿದ್ದಾರೆ. ವೇಮನನ ವಚನಗಳ ಹಿನ್ನೆಲೆ, ಸಾಮಾಜಿಕ ಸಂದರ್ಭವನ್ನು ವಿವರಿಸುತ್ತದೆ. ಅಲ್ಲದೆ ವಚನಗಳ ಸಾಮಾಜಿಕ ಮೌಲ್ಯವನ್ನೂ ತಿಳಿಸಲಾಗಿದೆ. ಆತನ ವಚನಗಳನ್ನೂ ಜೊತೆಯಲ್ಲಿಯೇ ಪ್ರಕಟಿಸಲಾಗಿದೆ.
©2025 Book Brahma Private Limited.