ನನ್ನೊಳಗೆ ನಿನ್ನ ನಡಿಗೆ - ಪಾಬ್ಲೊ ನೆರೂಡಾ ಕವಿತೆಗಳನ್ನು ಲೇಖಕಿ, ಅನುವಾದಕಿ ತೇಜಶ್ರೀಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಈ ಸಂಕಲನವು ನೆರೂಡಾ ತನ್ನ ತಾರುಣ್ಯ ಮತ್ತು ನಡುವಯಸ್ಸಿನಲ್ಲಿ ಬರೆದ ಕವಿತೆಗಳನ್ನು ಹೆಚ್ಚಾಗಿ ಆರಿಸಿಕೊಂಡಿದೆ. ತೀವ್ರ ಅನುಭವ ಮತ್ತು ಭಾವನೆಗಳ ಫಲವಾದ ತಲ್ಲಣ, ವಿಷಾದ ಮತ್ತು ರೋಮಾಂಚನಗಳು ಈ ಕವಿತೆಗಳ ಕೇಂದ್ರದಲ್ಲಿವೆ. ಇವು ಕೇವಲ ಗಂಡು ಹೆಣ್ಣಿನ ಸಂಬಂಧದ ಸಂಕೀರ್ಣ ನೆಲೆಗಳ ಫಲವಾದ ತಲ್ಲಣಗಳಲ್ಲ, ಬದಲಾಗಿ ನೆರೂಡಾನ ವ್ಯಕ್ತಿತ್ವ ಅವನ ಕಾಲದ ಸಮಾಜ-ಸಮುದಾಯಗಳು ಮತ್ತು ಅಷ್ಟೇ ಮುಖ್ಯವಾಗಿ ಅವನ ನಾಡಾದ ಚಿಲಿಯು ಅನುಭವಿಸುತ್ತಿದ್ದ ತಲ್ಲಣಗಳನ್ನು ಚಿತ್ರಿಸುವ ಕವಿತೆಗಳಾಗಿವೆ.
ಬಹಳ ಆಕರ್ಷಕವಾದ, ಮಾದಕವಾದ ಹಾಡುಕವಿತೆ ಮತ್ತು ವಾಚಕ ಕವಿತೆಗಳಲ್ಲಿ ಹಿಡಿದಿಡುವ ಸ್ಪ್ಯಾನಿಶ್ ತಲ್ಲಣಗಳು, ಕನ್ನಡದ ತಲ್ಲಣಗಳಿಗೆ ಪಡಿಮಿಡಿಯುವಂತೆ ಇಲ್ಲಿಯ ಅನುವಾದಗಳು ಸಮರ್ಥವಾಗಿ ಮಾಡಿವೆ.
©2024 Book Brahma Private Limited.