‘ಕೃಷ್ಣ ಸಖಿ’ - ಡಾ. ಧರ್ಮವೀರ್ ಭಾರತೀ ಅವರ ಹಿಂದಿ ಭಾಷೆಯ ಪ್ರಸಿದ್ಧ ಖಂಡಕಾವ್ಯವಾದ ಕನುಪ್ರಿಯಾವನ್ನು ಕವಿ, ಅನುವಾದಕ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಉನ್ನತ ವ್ಯಕ್ತಿತ್ವದ ಮಹತ್ವಾಕಾಂಕ್ಷಿ ಸಾಧಕ ರಾಧಾಕೃಷ್ಣ ಮತ್ತು ಅವನ ಪ್ರತಿಯೊಂದು ಹೆಜ್ಜೆಯಲ್ಲಿ ಕ್ಷಣಕ್ಷಣವೂ ಸಂಪೂರ್ಣ ಸಮರ್ಪಿತಳಾಗುವ ರಾಧೆಯ ಬದುಕನ್ನು ಆತ್ಮೀಯವಾಗಿ ಚಿತ್ರಿಸಿದ ಹೃದ್ಯ ಕಾವ್ಯವಿದು. ಕೃಷ್ಣ ಪ್ರಿಯೆ ರಾಧೆಯ ಅಂತರಂಗವನ್ನು ಅತ್ಯಂತ ಆಪ್ತವಾಗಿ, ಮನೋಜ್ಞವಾಗಿ ಚಿತ್ರಿಸಲಾಗಿದೆ. ಪ್ರೇಮಿಗಳ ದಾರುಣ ಕಥೆಯನ್ನು ಮನದುಂಬುವಂತೆ ವರ್ಣಿಸುವ ಕೃಷ್ಣಸಖಿ ಒಂದು ರೀತಿಯಲ್ಲಿ ಭಾರತೀಯ ಪರಂಪರೆ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಜೀವನಗಳನ್ನು ಮರುವಿಶ್ಲೇಷಣೆಗೆ ತೊಡಗಿಸುವ, ಹೊಸ ಒರೆಗಲ್ಲಿಗೆ ಹಚ್ಚಿ ನೋಡುವ ಸ್ತುತ್ಯ ಪ್ರಯತ್ನ ಈ ಕೃತಿ.
©2025 Book Brahma Private Limited.