’ಅಗ್ನಿ ಕಿರೀಟ’ದ ಮೂಲಕ ತೆಲುಗು ಕವಿ ವಿದ್ಯಾಸಾಗರ್ ಅವರ ಕವಿತೆಗಳನ್ನು ಕನ್ನಡಕ್ಕೆ ತರುವಲ್ಲಿ ಸ. ರಘುನಾಥ ಯಶಸ್ವಿಯಾಗಿದ್ದಾರೆ. ವಿದ್ಯಾಸಾಗರ್ ಆಂಧ್ರದ ಹಿರಿಯ ಐಎಎಸ್ ಅಧಿಕಾರಿ. ಆಧುನಿಕ ನಾಗರಿಕತೆ ಹಾಗೂ ಅಭಿವೃದ್ದಿಯ ಪಾತಕಗಳಲ್ಲಿ ಸಿಲುಕಿ ನರಳುತ್ತಿರುವ ನೆಲದಮ್ಮನ ಮೂಲ ಕಂದಮ್ಮಗಳ ಸಂಕಟದ ಬಗ್ಗೆ ಮಾನವೀಯ ಕಾಳಜಿಯನ್ನು ಅಗ್ನಿಕಿರೀಟದಲ್ಲಿ ತೆರೆದು ತೋರಿದ್ದಾರೆ.
“ಈಗಲೂ ಈ ಕಾಡು ನನ್ನದೆಂದೇ ಹೇಳುತ್ತೇನೆ ಹಕ್ಕಿಗಳನ್ನು ಹೊಡೆಯುತ್ತೇನೆ ವಾಲ್ಮೀಕಿಯಾಗುತ್ತೇನೆ. ನನ್ನ ಬದುಕು ಅಪರಾಧಮಯ ಎಂದು ಹೇಳುವ ನಿಮಗೆ ತಗ್ಗಿ ಬಗ್ಗಿ ಇರುವುದೇ ಅಪರಾಧವೆಂದು ಪಾಠ ಹೇಳುತ್ತೇನೆ” ಎಂದು ವಿದ್ಯಸಾಗರ್ ನಾಗರಿಕರೂಪದ ನೈಜ ಅಪರಾಧಿಗಳನ್ನು ಬೆತ್ತಲೆ ಮಾಡುತ್ತಾರೆ. ವಿಶ್ವಪ್ರಜ್ಞೆ ಮತ್ತು ನಿಸರ್ಗಪ್ರಜ್ಞೆಗಳೊಂದಿಗೆ ಮಾನವಪ್ರಜ್ಞೆಯನ್ನು ಸಮೀಕರಿಸುತ್ತಾರೆ.
©2025 Book Brahma Private Limited.