ಚಿದಾನಂದ ಸಾಲಿ ಅವರ ಅನುವಾದಿತ ಕವಿತೆಗಳ ಗುಚ್ಛ ಈ ಪುಸ್ತಕ. ಇಲ್ಲಿರುವ ಎಲ್ಲಾ ಕವನಗಳು ಬೇರೆ ಬೇರೆ ಪ್ರಾಂತೀಯ ಭಾಷೆಗಳ ಕಾವ್ಯದ ಶೈಲಿ ಮತ್ತು ದಿಕ್ಕುಗಳ ಸ್ಕೂಲ ಪರಿಚಯದ ಬೆಳಕಿನಲ್ಲಿ ಕನ್ನಡದ ಮಿತಿ ಮತ್ತು ಮಹತ್ವಗಳನ್ನು ಸ್ಪಷ್ಟವಾಗಿ ಕಾಣಿಸಲು ಪ್ರಯತ್ನಿಸಲಾಗಿದೆ. ಹೊರಗಿನದು ಒಳಗಿನದು ಎಂಬ ಭೇದವಿಲ್ಲದೆ ಎಲ್ಲವನ್ನೂ ಮುಕ್ತ ಮನಸ್ಸಿನಿಂದ ಎದುರುಗೊಳ್ಳುವ ಅಂಶಗಳು ಇಲ್ಲಿವೆ. ಭಾರತದ ಬೇರೆ ಬೇರೆ ಭಾಗದ ಹದಿನಾರು ಕವಿಗಳು, ನಾಲ್ವರು ಕವಯತ್ರಿಯರು ಸೇರಿ ಒಟ್ಟು ಇಪ್ಪತ್ತು ಕಾವ್ಯವ್ಯಕ್ತಿತ್ವಗಳ ಒಂದು ವಿಶಿಷ್ಟ ಕಾವ್ಯಕೂಟ ಇಲ್ಲಿದೆ.
©2025 Book Brahma Private Limited.