ಮೈಸೂರು ವಿ.ವಿ. ಕನ್ನಡ ಗ್ರಂಥ ಮಾಲೆಯಡಿ ಡಾ. ಕೆ. ಕೃಷ್ಣಮೂರ್ತಿ ಅವರು ಬರೆದ ಕೃತಿ ‘ಸಂಸ್ಕೃತ ಕಾವ್ಯ’ ಪ್ರಕಟಿಸಲಾಗಿದೆ. ಸಂಸ್ಕೃತ ಭಾಷೆಯು ಅತ್ಯಂತ ಪ್ರಾಚೀನ. ಸರ್ವ ಸಮರ್ಪಕವೂ ಆಗಿದೆ ಎಂಬುದು ಭಾಷಾ ವಿದ್ವಾಂಸರ ಅಭಿಪ್ರಾಯ.
ವೇದಗಳ ನಂತರ ಪುರಾಣ ಬಂದು ವಿಫುಲವಾದ ಸಾಹಿತ್ಯ ಸೃಷ್ಟಿಸಿತು. ತದನಂತರ ರಾಮಾಯಣ, ಮಹಾಭಾರತದಂತಹ ಸಾಹಿತ್ಯ ಹುಟ್ಟಿಕೊಂಡಿತು. ಇಂತಹ ಸಾಹಿತ್ಯವೆಲ್ಲವೂ ಮೂಲದಲ್ಲಿ ಸಂಸ್ಕೃತವೇ ಆಗಿದೆ. ಕಾಳಿದಾಸನ ನಂತರ ಭಾಸ, ಬಾಣ, ಮಮ್ಮಟ, ಶ್ರೀಹರ್ಷ, ಬಿಲ್ಹಣಭಟ್ಟ ಇವರ ಸಾಹಿತ್ಯವೂ ಸಂಸ್ಕೃತವೇ ಆಗಿದೆ. ಈ ಎಲ್ಲ ಪದ್ಯ-ಗದ್ಯ ರೂಪದ ಸಾಹಿತ್ಯವು ಸರಳ ಕನ್ನಡಕ್ಕೆ ಅನುವಾದವಾಗಬೇಕಿದೆ. ಆ ಪೈಕಿ, ಸಂಸ್ಕೃತ ಕಾವ್ಯ ಕೃತಿಯು ಒಂದು ಮಹತ್ವದ ಹೆಜ್ಜೆ ಎಂದು ಕೃತಿಯ ಪ್ರಧಾನ ಸಂಪಾದಕ ಡಾ. ಕೆ.ವಿ. ಪುಟ್ಟಪನವರು ಅಭಿಪ್ರಾಯಪಟ್ಟಿದ್ದಾರೆ.
©2025 Book Brahma Private Limited.