‘ರವೀಂದ್ರನಾಠ ಠಾಕೂರ್ ಕವನಗಳ ಓದು’ ಲೇಖಕ ಸಿ.ಪಿ. ನಾಗರಾಜ ಅವರ ಕೃತಿ. ಕೃತಿಯ ಕುರಿತು ಬರೆದಿರುವ ಅವರು ‘ರವೀಂದ್ರನಾಥ ಠಾಕೂರ್ ಅವರ ಕವನ ಸಂಕಲನಗಳಿಂದ ಆಯ್ದ ಹದಿನಾರು ಕವನಗಳನ್ನು ಓದುಗರ ಗಮನಕ್ಕೆ ತರಬೇಕೆಂಬ ಆಸೆಯಾಯಿತು. ಠಾಕೂರ್ ಅವರ ಕವನಗಳನ್ನು ಮೊದಲ ಬಾರಿ ಓದುವವರಿಗೆ ನೆರವಾಗಲೆಂಬ ಉದ್ದೇಶದಿಂದ ಕವನದಲ್ಲಿ ಜತೆಗೂಡಿರುವ ಪದಗಳನ್ನು ಬಿಡಿಸಿ ಬರೆದು, ಪದಗಳಿಗೆ ತಿರುಳನ್ನು ತಿಳಿಸಿ, ಕವನದಲ್ಲಿ ನಿರೂಪಣೆಗೊಂಡಿರುವ ಸಂಗತಿಗಳನ್ನು ವಿವರಿಸಿದ್ದೇನೆ ಎಂದಿದ್ದಾರೆ.
ಜೊತೆಗೆ ಗುರುಗಳಾದ ಕೆ.ವಿ.ನಾರಾಯಣ ಅವರು ಈ ಬರಹವನ್ನು ನೋಡಿ 'ಹೊಸ ತಲೆಮಾರಿನ ಓದುಗರಿಗೆ ಈ ರೀತಿಯ ಬರಹ ಉಪಯೋಗಕ್ಕೆ ಬರಬಹುದು' ಎಂದು ಹೇಳಿ, ನನ್ನ ಬರವಣಿಗೆಗೆ ಮಾರ್ಗದರ್ಶನ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಕೃತಿಯಲ್ಲಿನ ಕವನಗಳನ್ನು 1. ಜಿ.ರಾಮನಾಥ ಭಟ್ (ಅನುವಾದಕರು): ರವೀಂದ್ರ ಕಾವ್ಯ ಸಂಚಯ 2. ಜೆ.ರಾಮಲಿಂಗೇಗೌಡ (ಅನುವಾದಕರು): ಗುರುದೇವ ರವೀಂದ್ರ ಗೀತಾಂಜಲಿ 3. ಕುವೆಂಪು (ಅನುವಾದಕರು): ಕುಟೀಚಕ ಕವನ ಸಂಕಲನ, ಈ ಮೂರು ಕೃತಿಗಳಿಂದ ಆಯ್ದುಕೊಂಡಿದ್ದಾರೆ.
©2025 Book Brahma Private Limited.