ಹೊರವಲಯದ ಗಾಳಿ

Author : ಬಿ.ಎ. ಸನದಿ

Pages 90

₹ 80.00




Published by: ಸುಂದರ ಪುಸ್ತಕ ಪ್ರಕಾಶನ
Address: ಧಾರವಾಡ
Phone: 9449125172

Synopsys

ಬಿ. ಎ. ಸನದಿಯವರ ಅನುವಾದಿತ ಕವನ ಸಂಕಲನ 'ಹೊರವಲಯದ ಗಾಳಿ’. ಇದು ಸಂಪೂರ್ಣ ಅನುವಾದಿತ ಕವನಗಳಾಗಿದ್ದರೂ, ಈಗಾಗಲೇ ಅವರ ಬೇರೆ ಬೇರೆ ಕವನ ಸಂಕಲನಗಳಲ್ಲಿ ಪ್ರಕಟವಾಗಿವೆ. ಕೆಲವು ಅಪ್ರಕಟಿತ ಕವನಗಳೂ ಇಲ್ಲಿವೆ. ಇಲ್ಲಿ ಸುಮಾರು 55 ಅನುವಾದಿತ ಕವಿತೆಗಳಿವೆ. ಇಂಗ್ಲಿಷ್, ಉರ್ದು, ಅರೇಬಿಕ್, ಚೀನಿ, ಮರಾಠಿ ಹೀಗೆ ಹಲವು ಭಾಷೆಗಳು, ಹಲವು ಭಾವಗಳನ್ನು ಕನ್ನಡ ಭಾಷೆಯ ಲಯಕ್ಕೆ ಪೂರಕವಾಗಿ ಇಳಿಸಿಕೊಟ್ಟಿದ್ದಾರೆ ಕವಿ ಸನದಿ, ಅಮೆರಿಕನ್ ಕವಿ ಹೆನ್ರಿಯ ಬಾಣ ಮತ್ತು ಹಾಡು ಹೇಗೆ ಈ ಭೂಮಿಯ ಮೇಲೆ ಹಾಡು ಗಾಳಿಯ ರೂಪದಲ್ಲಿ ಹರಡುತ್ತಾ ಮನಮನದಲ್ಲಿ ಬೀಡು ಕಟ್ಟಿಕೊಳ್ಳುತ್ತವೆ ಎನ್ನುವುದನ್ನು ಹೇಳುತ್ತದೆ. ಥೋಮಸ್ ಹುಡ್ ಅವರ 'ರುತ್' ಸನದಿಯವರ ಲೇಖನಿಯಲ್ಲಿ ಒಂದು ತೆನೆ' ಯಾಗಿ ಹೊಸದಾಗಿ ಹುಟ್ಟಿದೆ. ಖಲೀಲ್ ಗಿಬ್ರಾನ್‌ರ 'ಲೀವ್ ಮಿ ಪೈ ಭೇಮರ್' “ನನ್ನ ಪಾಡಿಗೆನ್ನ ಬಿಡು' ಎಂದು ನಿಂದಕರಿಗೆ ಮನವಿ ಮಾಡಿಕೊಡುತ್ತದೆ. 'ಮಮತೆಯ ಮೆರವಣಿಗೆಯ' ಕಡೆಗೆ ಕವಿ ಕೈ ತೋರಿಸಿ, ನಿಂದಕನನ್ನು ದೂರ ನಿಲ್ಲು ಎಂದು ಹೇಳುತ್ತಾನೆ. ಗಿಬ್ರಾನ್‌ನನ್ನು ತನ್ನದೇ ಲಯಕ್ಕೆ ಜೋಡಿಸುವ ಪ್ರಯತ್ನವನ್ನು ಮಾಡಿದ್ದಾರೆ ಸನದಿ, ಶೆಲ್ಲಿಯ 'ಲವ್ ಫಿಲೋಸಫಿ' ಸನದಿಯ ಕೈಯಲ್ಲಿ ಪ್ರೇಮ ಪ್ರಣಾಲಿ'ಯಾಗಿದೆ. ರವೀಂದ್ರನಾಥ ಟಾಗೋರರ ಗೀತಾಂಜಲಿಯನ್ನು ಕನ್ನಡಕ್ಕಿಳಿಸುತ್ತಾ ತನ್ನೆಲ್ಲ ಬಲದಿಂದ ಬಿರುಗಾಳಿ, ಶಾಂತಿ ಭೇದಿಸುತ ಹುಟ್ಟು, ಕೊನೆಗಪ್ಪುವೊಲು ಶಾಂತಿ ನಿನ್ನ ಪ್ರೀತಿಗೆ ನನ್ನ ಸ್ಮತಿ ಅಸಹಕೃತಿಯಾಗಿ ನಿಂದರೂನು ಮಿಡಿವುದೆದೆ ಹಾಗೆಯೇ ಅಬ್ರಹಾಂ ಲಿಂಕನ್ ಅವರ ಮೂರು ಕವಿತೆಗಳು ಸರಳ ಕನ್ನಡದಲ್ಲಿ ಮನ ಮುಟ್ಟುತ್ತದೆ. ಯೆಮೆನ್ ಕವಿ ಮುಹಮ್ಮದ್ ನೌಮಾನ್ ಅವರ 'ಸೆರಮನೆಯಲ್ಲಿ' ಕವಿತೆ ವರ್ತಮಾನದ ಈ ಸಂದರ್ಭದಲ್ಲಿ ಹೆಚ್ಚು ಆಪ್ತವಾಗಿ ಓದುಗರನ್ನು ಕಾಡುವಂತಿದೆ.

About the Author

ಬಿ.ಎ. ಸನದಿ
(18 August 1933 - 31 March 2019)

ನಾಟಕಕಾರ, ಕಥೆಗಾರ, ಅನುವಾದಕ ಬಿ.ಎ. ಸನದಿ ಅವರು 1933 ಆಗಸ್ಟ್‌ 18ರಂದು ಬೆಳಗಾವಿ ಜಿಲ್ಲೆಯ ಸಿಂದೊಳ್ಳಿಯಲ್ಲಿ ಜನಿಸಿದರು. ತಂದೆ ಅಹಮ್ಮದ್‌, ತಾಯಿ ಆಯೆಷಾ. ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದ ಇವರು ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು.  ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿ ಸಮಾಜ ಶಿಕ್ಷಣಾಧಿಕಾರಿಯಾಗಿ, ಪಂಚಾಯತ್ ರಾಜ್ ಪತ್ರಿಕೆಯ ಸಹಾಯಕ ಸಂಪಾದಕರಾಗಿ, ಮುಂಬೈ ಆಕಾಶವಾಣಿಯ ಕುಟುಂಬ ಕಲ್ಯಾಣ ಅಧಿಖಾರಿಯಾಗಿ ಕೆಲಸ ಮಾಡಿ ನಿವೃತ್ತರಾದರು.  ಸನದಿಯವರ ತಾಜ್‌ ಮಹಲ್ ಮತ್ತು ಧೃವ ಬಿಂದು ಕವನ ...

READ MORE

Related Books