‘ಪ್ರಣಯ ಶತಕ’ ಕೃತಿಯ ಮೂಲ ಲೇಖಕ ಟಿ.ಪಿ ರಾಜೀವನ್. ಆರತಿ ಎಚ್.ಎನ್ ಅವರು ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಯ ಬೆನ್ನುಡಿಯಲ್ಲಿ ಕೆಲವೊಂದು ವಿಚಾರಗಳು ಹೀಗಿವೆ : ‘ಪ್ರಣಯ ಶತಕಂ’ ನಲ್ಲಿ ಹೆಸರೇ ಹೇಳುವಂತೆ ನೂರು ಕವನಗಳಿವೆ. ಇವನ್ನು ಹನಿಗವನಗಳೆಂದು ಕರೆಯಲು ಉದ್ದೇಶಿಸುವುದಿಲ್ಲ. ವಸ್ತುವನ್ನು ಹಿಡಿದಿಡುವ ಸಾಧ್ಯತೆಗನುಗುಣವಾಗಿ ಕೆಲವು ಕವನಗಳು ತುಸು ದೀರ್ಘವೆನಿಸಿವೆ. ಇನ್ನು ಕೆಲವು ಮೂರು ಅಥವಾ ನಾಲ್ಕು ಪುಟ್ಟ ಪುಟ್ಟ ಮಡಿಕೆಗಳನ್ನು ಹೊಂದಿದ್ದು ಬಿಡಿಸಿಟ್ಟಾಗ ಒಂದೇ ಸಾಲು ಅಥವಾ ಒಂದೇ ವಾಕ್ಯವಾಗುತ್ತದೆ. ಇಲ್ಲಿನ ಒಂದುನೂರು ಪುಟಗಳೆಂದರೆ ನಾಲ್ಕುನೂರು ಪುಟಗಳು! ಇಲ್ಲಿನ ನಾಲ್ಕುನೂರು ಬಿಡಿಗಳೆಂದರೆ ನಾಲ್ಕು ಇಡಿಗಳು! ನಾಲ್ಕು ಇಡಿಗಳೆಂದರೆ ಒಂದು ಪುಸ್ತಕ ಎಂಬುದಿದೆ ಎಂದು ವಿಶ್ಲೇಷಿತವಾಗಿದೆ.
©2024 Book Brahma Private Limited.