ಕನ್ನಡ ಸುಬೋಧಿನಿಯ ವ್ಯಾಖ್ಯಾನ ಸಹಿತ ಕೃತಿಯೇ-ತಿರುಪ್ಪಾವೈ. ಕೃತಿಯ ಕರ್ತೃ-ಕೆ. ಎಸ್. ನಾರಾಯಣಾಚಾರ್ಯ. ಆಂಡಾಳ್, ಹನ್ನೆರಡು ಜನ ಆಳ್ವಾರುಗಳಲ್ಲಿ ಒಬ್ಬಳು.ತಮಿಳು ಭಾಷೆಯಲ್ಲಿ ಪ್ರಸಿದ್ಧವಾಗಿರುವ ತಿರುಪ್ಪಾವೈಗಳ ರಚನೆ ಮಾಡಿರುವವಳು. ಈಕೆ ಪರಿಯಾಳ್ವಾರರ ಸಾಕುಮಗಳು. ಗೋದಾದೇವಿ ಎಂದೂ ಹೆಸರು. ಈ ಹೆಣ್ಣು ಮಗಳು ಕನಸಿನ ದೈವವೊಂದಕ್ಕೆ ಉಸಿರು ಹೊಯ್ದು ಆತನನ್ನು ವರಿಸಿ ಆತನಲ್ಲೇ ಮೈಗರೆದಳು. ಉಪನಿಷತ್ಸಾರವೆಂದು ಪ್ರಖ್ಯಾತವಾದ ತಿರುಪ್ಪಾವೈ ಎಂಬ ಮೂವತ್ತು ಬಿಡಿ ಪದ್ಯಗಳ ಗೀತ ಮತ್ತು ನಾಚ್ಚಿಯಾರ್ ತಿರುಮೊಳಿ ಎಂಬ 147 ಬಿಡಿ ಪದ್ಯಗಳನ್ನು ತಮಿಳುನಲ್ಲಿ ರಚಿಸಿದ್ದು, ಅವುಗಳ ಕನ್ನಡಾನುವಾದ ಹಾಗೂ ವ್ಯಾಖ್ಯಾನವನ್ನು ಒಳಗೊಂಡಿದೆ.
©2024 Book Brahma Private Limited.