‘ಗೋರಿಯ ಮೇಲೆ ರಾಗಿಯ ಕೊನರು’ ಆದಿವಾಸಿ ಸಂವೇದನೆ ಮತ್ತು ಪ್ರಜ್ಞೆಯನ್ನು ಹಿಂದಿ ಕಾವ್ಯ ಪ್ರಪಂಚಕ್ಕೆ ದೊಡ್ಡ ಮಟ್ಟದಲ್ಲಿ ತಂದ ಜೆಸಿಂತಾ ಕೆರ್ಕೆಟ್ಟಾ ಅವರ ಮೊದಲ ಕವನ ಸಂಕಲನದ ಕನ್ನಡ ಅನುವಾದ. ಈ ಕವನಗಳನ್ನು ಲೇಖಕ ಸಂವರ್ತ ಸಾಹಿಲ್ ಕನ್ನಡೀಕರಿಸಿದ್ದಾರೆ. ಆದಿವಾಸಿ ಸಮುದಾಯಗಳ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಇಂಡಿಯಾ ಟುಡೇ ಗ್ರೂಪ್ ಘೋಷಿಸಿದ್ದ ಪ್ರಶಸ್ತಿಯನ್ನು ನಿರಾಕರಿಸುವ ಮೂಲಕ ಪ್ರಭುತ್ವದ ಅನ್ಯಾಯಕ್ಕೆ ಎದುರಾಗಿ ನಿಂತ ಕವಯತ್ರಿ, ಪತ್ರಕರ್ತೆ, ಜಸಿಂತಾ ಕೆರ್ಕೆಟ್ಟ ಅವರ ಅಂಗೋರ್ ಸಂಕಲನದ ಕವಿತೆಗಳನ್ನು ಗೋರಿಯ ಮೇಲೆ ರಾಗಿಯ ಕೊನರು ಎಂಬ ಶೀರ್ಷಿಕೆಯಲ್ಲಿ ಸಂವರ್ತ ಸಾಹಿಲ್ ಕನ್ನಡಕ್ಕೆ ಅನುವಾದಿಸಿದ್ದಾರೆ.
©2025 Book Brahma Private Limited.