ಲೇಖಕರಾದ ವಿಜಯಾ ಗುತ್ತಲ ಹಾಗೂ ವಿಕ್ರಮ ವಿಸಾಜಿ ಅವರು ಜಂಟಿಯಾಗಿ ಆಧುನಿಕ ಗ್ರೀಕ್ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ ಕೃತಿ-ಗ್ರೀಕ್ ಹೊಸ ಕಾವ್ಯ. ರೋಮನ್ ಹಾಗೂ ಗ್ರೀಕ್ ಸಂಸ್ಕೃತಿಗಳು ಅತ್ಯಂತ ಪ್ರಾಚೀನವಾದವುಗಳು. ಗ್ರೀಕ್ ಕವಿಗಳು ಪುರಾಣಗಳ ಕಥೆಗಳನ್ನು ಕಾವ್ಯಗಳಲ್ಲಿ ಬಳಸುವುದು ಹೆಚ್ಚು. ಈ ಪುರಾಣಗಳು ಅಲ್ಲಿಯ ಸಂಸ್ಕೃತಿಯ ಬೇರು ಎನ್ನುವಷ್ಟು ಅಲ್ಲಿಯ ಜನಜೀವನದ ಮೇಲೆ ಪ್ರಭಾವ ಬೀರಿವೆ. ವಿಶ್ವದ ಇತರೆ ದೇಶದ ಕವಿಗಳಿಗಿಂತ ಗ್ರೀಕ್ ಕವಿಗಳು ಪುರಾಣದ ವಸ್ತುವನ್ನು ವಿಭಿನ್ನವಾಗೇ ಬಳಸುವುದು ವಿಶೇಷ. ಅದನ್ನು ಇಲ್ಲಿಯ ಅನುವಾದಿತ ಕವಿತೆಗಳಲ್ಲಿ ಕಾಣಬಹುದು.
©2024 Book Brahma Private Limited.