‘ನನ್ನ ಐವತ್ತೊಂದು ಕವಿತೆಗಳು’ ಅಟಲ್ ಬಿಹಾರಿ ವಾಜಪೇಯೀ ಅವರ ಕವನ ಸಂಕಲನದ ಅನುವಾದ ವಾಗಿದೆ. ವಿದ್ಯಾರ್ಥಿ ದೆಸೆಯಿಂದಲೂ ಅಟಲ್ ಜಹಾರಿ ವಾಜಪೇಯಿಯವರ ವಾಕ್‌ಪಟುತ್ವ ಹಾಗೂ ಅವರ ಬರವಣಿಗೆಗಳನ್ನು ಮೆಚ್ಚುತ್ತಲೇ ಬಂದಿದ್ದ ಕಾರಣ ಅವರು ಬರೆದ ಆ 51 ಕವಿತೆಗಳನ್ನು ಓದಿದೆ. ಅವು ನನ್ನನ್ನು ಮೋಡಿ ಮಾಡಿದವು. ವಾಜಪೇಯಿಯವರ ದೇಶಪ್ರೇಮ, ಅವರ ಸೋಲು ಗೆಲುವುಗಳು, ನೋವು ಸವಾಲುಗಳು, ಅದರ ಹತಾಶೆ, ವ್ಯಥೆ, ಪ್ರಾಣಿಗಳ ಮೇಲಿದ್ದ ಅವರ ಒಲವು, ಅವರ ಸಭ್ಯತೆ, ಅವರ ಸಂಯಮ ಹೀಗೆ ಅವರ ಒಟ್ಟಾರೆ ವ್ಯಕ್ತಿತ್ವವೇ ಈ ಕವನಗಳೆಲ್ಲ ಹಾಸುಹೊಕ್ಕಾಗಿರುವುದನ್ನು ಮನಗಂಡು ಅವನ್ನು ಮತ್ತೆ ಮತ್ತೆ ಓದಿದೆ, ಅವರ ಕವಿ ಸಂವೇದನಗೆ ಮಾರುಹೋದೆ ಎನ್ನುತ್ತಾರೆ ಲೇಖಕ ಡಿ.ವಿ ಗುರುಪ್ರಸಾದ್.
©2024 Book Brahma Private Limited.