‘ಉಭಯವಾಣಿ’ ಸಿ. ನಾಗಣ್ಣ ಅವರ ಅನುವಾದಿತ ಕವನಗಳಾಗಿವೆ. ಜಗತ್ತಿನ ಯಾವ ಮೂಲೆಯಲ್ಲೇ ಕುಳಿತು ಸಾಹಿತಿ ಕವಿಗಳು ಸಾಹಿತ್ಯರಚನೆಗೈದರೂ ಎಲ್ಲೆಡೆ ಅದರ ಧ್ವನಿ ಕಳಕಳಿ ಒಂದೇ ಆಗಿರುತ್ತದೆಂಬ ಅಂಶವನ್ನು ಅನುವಾದಿತ ಸಾಹಿತ್ಯದಲ್ಲಿ ಧಾರಾಳ ವಾಗಿ ಕಾಣಬಹುದು.
ಹೊಸತು-2004- ಸೆಪ್ಟಂಬರ್
ಪ್ರಮುಖವಾಗಿ ಇಂಗ್ಲಿಷ್ ಭಾಷೆಯಿಂದ ಮತ್ತು ಭಾರತೀಯ ಭಾಷೆಗಳಿಂದ ಅನುವಾದಿಸಲಾದ ಕವನಗಳು. ಆ ದನಿ' ಎಂಬ ಮೊದಲ ಭಾಗದಲ್ಲಿ ಪಾಶ್ಚಾತ್ಯ ಹಾಗೂ ಈ ದನಿ'' ವಿಭಾಗದಲ್ಲಿ ದೇಶೀಯವಾದ ಗುರುತುಗಳು ಸ್ಪಷ್ಟವಾಗಿ ಕಂಡುಬರುತ್ತಿವೆ. ಕವನಗಳ ಸ್ವರೂಪ ನಿರ್ಗತಿಕ ಜನಾಂಗ ಮತ್ತು ಕ್ರೌರ್ಯಕ್ಕೆ ಬಲಿಯಾದ ಜನತೆಯ ಪರವಾಗಿದೆ. ಜಗತ್ತಿನ ಯಾವ ಮೂಲೆಯಲ್ಲೇ ಕುಳಿತು ಸಾಹಿತಿ ಕವಿಗಳು ಸಾಹಿತ್ಯರಚನೆಗೈದರೂ ಎಲ್ಲೆಡೆ ಅದರ ಧ್ವನಿ ಕಳಕಳಿ ಒಂದೇ ಆಗಿರುತ್ತದೆಂಬ ಅಂಶವನ್ನು ಅನುವಾದಿತ ಸಾಹಿತ್ಯದಲ್ಲಿ ಧಾರಾಳ ವಾಗಿ ಕಾಣಬಹುದು. ಮಿಡಿಯುವ ಮನಸ್ಸು ಅಲ್ಲಿ ಮಾನವತೆ ರೂಪಧಾರಣೆ ಮಾಡಿರುತ್ತದೆ. ಎಲ್ಲ ಕಡೆಯೂ ಜನಪರ ನೀತಿ ಧೋರಣೆಗಳು ಒಂದೇ ಆಗಿರುತ್ತವೆ ಎಂಬುದು ಜಗತ್ತಿನ ಸಾಹಿತ್ಯ ತೋರಿಸುತ್ತಿದೆ. ಕನ್ನಡದ ಜಾಯಮಾನಕ್ಕೆ ಒಗ್ಗುವಂತಹ ಅನುವಾದ.
©2024 Book Brahma Private Limited.