ಕವಿಗಳಾದ ಮಲರ್ ವಿಳಿ ಕೆ, ದಿವ್ಯದರ್ಶಿನಿ ಎಂ ಅವರು ತಮಿಳಿನಿಂದ ಕನ್ನಡಕ್ಕೆ ಅನುವಾದ ಮಾಡಿದ ಕವಿತೆಗಳು ಹಾಗೂ ಹಾಯ್ಕುಗಳ ಸಂಕಲನ ‘ ಬಣ್ಣಗಳು ಮಾತಾಡಲಿ’. ಈ ಕೃತಿಗೆ ಲೇಖಕ ಶ್ರೀಧರ ಬನವಾಸಿ ಅವರು ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ- ‘ಇಳಂಗೊ ಅವರ ತಮಿಳಿನ ಕವಿತೆಗಳನ್ನು ಕನ್ನಡಕ್ಕೆ ತರುವಲ್ಲಿ ಅನುವಾದಕರಾದ ಡಾ. ಮಲರ್ ವಿಳಿ ಅವರ ಶ್ರಮ, ಭಾಷಾ ಪಾಂಡಿತ್ಯ ಎದ್ದು ಕಾಣುತ್ತದೆ. ಈ ಕೃತಿಯ ಮೂಲಕ ಇಳಂಗೊ ಅವರ ಹಾಯ್ಕುಗಳನ್ನು ಡಾ.ಮಲರ್ ವಿಳಿ ಅವರ ಮಗಳು ದಿವ್ಯದರ್ಶಿನಿ ಅನುವಾದಿಸಿ ಕನ್ನಡ ಅನುವಾದ ಕ್ಷೇತ್ರಕ್ಕೆ ಹೊಸ ಭರವಸೆಯನ್ನು ಹುಟ್ಟಿಸಿದ್ದಾಳೆ. ಎರಡು ಭಾಷೆಗಳ ನಡುವಿನ ಸಾಹಿತ್ಯ-ಸಮಾಗಮವನ್ನು ಅನುವಾದವೆಂಬ ಸೇತುವೆಯ ಮೂಲಕ ಇವರಿಬ್ಬರೂ ನಮ್ಮನ್ನು ಸಂಪರ್ಕಿಸಿದ್ದಾರೆ. ಇಳಂಗೊ ಕವಿತೆಗಳು ಕನ್ನಡ ಓದುಗರಿಗೆ ಅವಶ್ಯಕವಿತ್ತು ಎಂಬುದು ಈ ಕೃತಿ ಓದಿದ ಮೇಲೆ ಮನವರಿಕೆಯಾಗುತ್ತದೆ. ಈ ಸಂಕಲನದ ಮೂಲಕ ಇಳಂಗೊ ಅವರ ಅಂತಃಸತ್ವವನ್ನು ಅರ್ಥಮಾಡಿಕೊಳ್ಳಬಹುದು. `ಬಣ್ಣಗಳು ಮಾತಾಡಲಿ’ ಸಂಕಲನದ ಮೂಲಕ ಪಿಚ್ಚಿನಿಕ್ಕಾಡು ಇಳಂಗೊ ಅವರು ಕನ್ನಡದರಮನೆಯನ್ನು ಪ್ರವೇಶಿಸುತ್ತಿದ್ದಾರೆ’ ಎಂದಿದ್ದಾರೆ.
©2024 Book Brahma Private Limited.