ರವೀಂದ್ರನಾಥ ಟ್ಯಾಗೋರರ ನೋಬೆಲ್ ಪ್ರಶಸ್ತಿ ವಿಜೇತ ಕೃತಿ 'ಗೀತಾಂಜಲಿ'ಯ ಸರಳ ಕಾವ್ಯಾನುವಾದ ಇದು. ಮೂಲ ಇಂಗ್ಲಿಷಿನಲ್ಲಿರುವ 103 ಗದ್ಯ ಕವನಗಳನ್ನು, ಸರಳ ಕವನ ರೂಪದಲ್ಲಿ ಕನ್ನಡಕ್ಕೆ ಅನುವಾದಿಸಲಾಗಿದೆ.
ಡಾ. ನವೀನ್ ಹಳೇಮನೆ ಹುಟ್ಟಿದ್ದು 1975 ತುಮಕೂರು ಜಿಲ್ಲೆಯ ಹಾಲುಗೋಣದಲ್ಲಿ. ಭಾಷಾವಿಜ್ಞಾನದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದಿರುವ ಅವರು ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ಬೋಧಕ, ಮೃದುಕೌಶಲ್ಯಗಳ ತರಬೇತುದಾರ ಹಾಗು ಅನುವಾದಕ. ರವೀಂದ್ರನಾಥ ಟ್ಯಾಗೋರರ ಗೀತಾಂಜಲಿ (2007), ಇಂದುಮತಿ ಶೇವರೆ ಅವರ ತಾತ್ಯಾ ಟೋಪೆ (2012) ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ಧಾರೆ. ಸಹ-ಅನುವಾದಕನಾಗಿ ಕಮಲಾ ಮುಕುಂದ ಅವರ ‘ಇವತ್ತು ಶಾಲೆಯಲ್ಲಿ ನೀನೇನು ಪ್ರಶ್ನೆ ಕೇಳಿದೆ?’ ಹಾಗೂ ಆ ಭಾಷೆ ಈ ಭಾಷೆಯಂತಲ್ಲ ಈ-ಭಾಷೆ (2010) ಮತ್ತು ಇಂಗ್ಲಿಷ್ ಕಲಿ(ಯೋ)ಸೋ ಆಟ (2012) ಎಂಬ ಕೃತಿಗಳು ಪ್ರಕಟವಾಗಿವೆ. ಪ್ರಸ್ತುತ ರಾಮನಗರ ಜಿಲ್ಲೆಯ ಲಕ್ಷ್ಮೀಪುರದ ಸರ್ಕಾರಿ ...
READ MORE