`ಕಾಲದ ಸಾಕ್ಷಿಯಾಗಿ' ಎಂಬುದು ಅಬಾಬಿ ಸಂಕಲನ. ತೆಲುಗು ಮೂಲದ ಷೇಕ್ ಅಬ್ದುಲ್ ಹಕೀಂ ಅವರ ಮೊದಲ ಕೃತಿಯನ್ನು ಕವಿ-ಲೇಖಕ ಧನಪಾಲ ನಾಗರಾಜಪ್ಪ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಅಬಾಬಿಗಳು ಹೊಸ ಪ್ರಕಾರವನ್ನು ಸೃಷ್ಟಿಸಿವೆ. ಈ ಕೃತಿಯು, ಸಾಹಿತ್ಯ ಚರಿತ್ರೆಯಲ್ಲಿ ಪ್ರಕಟಿತ ಎರಡನೇ ಅಬಾಬಿ ಸಂಕಲನವಾಗಿದೆ.
ಕೃತಿಗೆ ಬೆನ್ನುಡಿ ಬರೆದ ಲೇಖಕಿ ಬೆಳಗಾವಿಯ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಅವರು ‘ಜಾಗತಿಕ ಸಂತರ ಮಹೋನ್ನತವಾದ ತತ್ವಾದರ್ಶಗಳನ್ನು ಪ್ರತಿನಿಧಿಸುವ ಅಬಾಬಿಗಳಲ್ಲಿನ ಅಭಿವ್ಯಕ್ತಿಗಳು ನಿಜಕ್ಕೂ ಮಾನವೀಯ ಉಕ್ತಿಗಳಾಗಿವೆ. ಒಬ್ಬ ಕವಿಯ ಅಂತರಾಳದ ಜಿಜ್ಞಾಸೆಗಳು ಕೇವಲ ಆಯಾ ಭಾಷಿಕ ನೆಲೆಗಳಲ್ಲಿ ಮಾತ್ರ ಉಳಿದುಕೊಳ್ಳುವುದ ರಿಂದ ಸಾರ್ವತ್ರಿಕ ಸಿದ್ಧಾಂತಗಳು ಆಸಕ್ತರನ್ನು ತಲುಪುವಲ್ಲಿ ಸೋಲುತ್ತಿವೆ. ಇಂತಹ ಕೊರತೆಯನ್ನು ತುಂಬಬಲ್ಲ ಶಕ್ತಿ ಇರುವುದು ಅನುವಾದಕ್ಕೆ ಮಾತ್ರ. ಈ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿರುವ ಧನಪಾಲ ನಾಗರಾಜಪ್ಪ ಅವರು ಅಭಿನಂದನಾರ್ಹರು’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.