ಪಂಜಾಬಿ ಮತ್ತು ಹಿಂದಿ ಭಾಷೆಯ ಲೇಖಕಿ ಅಮೃತಾ ಪ್ರೀತಂ ಅವರ ಕವಿತೆಗಳನ್ನು ಕನ್ನಡಕ್ಕೆ ರೇಣುಕಾ ನಿಡಗುಂದಿ ಅವರು ತಂದಿದ್ದಾರೆ.
’ಬಾ ಇಂದಾದರೂ ಮಾತಾಡೋಣ’ ಕವನ ಸಂಕಲನವು ಸಮಕಾಲೀನ ತಲ್ಲಣಗಳಿಗೆ ಮುಖಾಮುಖಿಯಾಗುತ್ತದೆ. ಮಾನವೀಯ ಮೌಲ್ಯಗಳ ಇತಿಹಾಸವನ್ನು ಪುನರ್ ಸ್ಥಾಪಿಸುವ ಪ್ರಯತ್ನವೂ ಇಲ್ಲಿ ನಡೆದಿದೆ. ಮಾನವ ಧರ್ಮ ಮತ್ತು ಜೀವನ ಧರ್ಮಗಳೆರಡೂ ಅಮೃತಾ ಪ್ರೀತಂ ಅವರ ಕಾವ್ಯದುದ್ದಕ್ಕೂ ಕಾಣುವಂತದ್ದು. ಹೆಣ್ಣು ನೋಟದ ನೂರೆಂಟು ಭಾವಗಳನ್ನು ನೂರಾರು ಪ್ರತಿಮೆಗಳ ಮೂಲಕ ಪರಿಚಯಿಸುವ ಕಾವ್ಯ ಕುಸುರಿ ಅಮೃತಾ ಪ್ರೀತಂ ಅವರ ರಚನೆಯಲ್ಲಿದೆ.
©2024 Book Brahma Private Limited.