ಹಿಂದೂ- ಮುಸ್ಲಿಂ ಬದುಕನ್ನು ಅನುಭಾವದ ನೆಲೆಯಲ್ಲಿ ನೊಡುವ ಯತ್ನ ’ಜಾಡಮಾಲಿಯ ಜೀವ ಕೇಳುವುದಿಲ್ಲ’. ಇದು ಧರ್ಮದ ಎಲ್ಲೆಗಳನ್ನು ಮೀರಿದ ಒಟ್ಟು ೪೭ ಕವಿಗಳ ಜೀವನ ದೃಷ್ಟಿಯನ್ನು ಹಿಡಿದಿಡುತ್ತದೆ.
ಮಾನವೀಯತೆಯನ್ನೇ ಸೂಸುವಂತಿರುವ ಈ ಕವಿತೆಗಳು ಸಾಹಿತ್ಯದ ಅಧ್ಯಯನದ ದೃಷ್ಟಿಯಿಂದ ಮಾತ್ರವಲ್ಲದೆ ಸಮಾಜದ ಅಸ್ವಸ್ಥತೆ ಕಾರಣಕ್ಕೂ ಮಹತ್ವದ್ದಾಗಿವೆ.
ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಕೃತಿ ಚರ್ಚೆಗೆ ಒಳಗಾಗಿದ್ದು’ಕನ್ನಡದ ಕಿಟಕಿಯಿಂದ ಜಗತ್ತಿನ ಸಾಹಿತ್ಯ ಲೋಕವನ್ನು ನೋಡುವ ಅದ್ಭುತ ಪ್ರಯತ್ನದ ಫಲ’ ಎಂದು ಉಪನ್ಯಾಸಕ ಸಂಗಮೇಶ ಗಣಿ ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.