ಪರ್ಷಿಯನ್ ಕವಿ ಜಲಾಲುದ್ದೀನ್ ರೂಮಿ, ಅಧ್ಯಾತ್ಮಿಕ ಅನುಭೂತಿ ಮತ್ತು ಪ್ರೇಮದ ಮಹತ್ವವನ್ನು ಜಗತ್ತಿಗೆ ಸಾರಿದವನು.ಇವರ ಕವಿತೆಗಳನ್ನು ಉದಯಕುಮಾರ್ ಹಬ್ಬು ಕನ್ನಡಕ್ಕೆ ತಂದಿದ್ದಾರೆ. 'ನನಗೆ ರೂಮಿಯಲ್ಲಿ ಬೌದ್ಧ ನಾಗಾರ್ಜುನನ ಶೂನ್ಯತೆ ಕಲ್ಪನೆಯು ಕಂಡು ಬಂದಿದೆ. ಉಪನಿಷತ್ತಿನ ಅದ್ವೈತ ಸಿದ್ಧಾಂತವೂ ರೂಮಿಯ ಕವಿತೆಗಳಲ್ಲಿ ಕಾಣಬಹುದಾಗಿದೆ. ಅಂತಿಮವಾಗಿ ಎಲ್ಲ ಧರ್ಮ ತತ್ವವೂ ಒಬ್ಬ ದೇವನ ಕುರಿತಾಗಿ ಮತ್ತು ಅವನೊಡನೆ ಐಕ್ಯಗೊಳ್ಳುವ ಅದ್ವೈತವೇ ಆಗಿ ಇವೆಲ್ಲ ರೂಮಿಯ ಕವಿತೆಗಳಲ್ಲಿ ಅಭಿವ್ಯಕ್ತಿಗೊಂಡಿವೆ. ಈ ಸಂಕಲನವು ಸೂಫಿ ತತ್ವಶಾಸ್ತ್ರವನ್ನು ಅರಿಯಲು ಒಂದು ಮೆಟ್ಟಿಲಾಗಿ ಖಂಡಿತಕ್ಕೂ ಸಹಕಾರಿ,' ಎನ್ನುವುದು ಅನುವಾದಕರ ಮಾತು. ಸುಮಾರು 52 ರೂಮಿ ಕವಿತೆಗಳನ್ನು ಈ ಕೃತಿಯಲ್ಲಿದ್ದು, ಕವಿತೆಯ ಕೊನೆಯಲ್ಲಿ ಅದರ ಸಾರವನ್ನು ವಿವರಿಸುವಂಥ ಟಿಪ್ಪಣಿಗಳನ್ನು ಅನುವಾದಕರು ಬರೆದಿದ್ದಾರೆ.
ಅನುಭಾವಿಯ ಅಸಾಧಾರಣ ಶಕ್ತಿಯನ್ನು ಕಟ್ಟಿಕೊಡುವ ರೂಮಿ ಕವಿತೆಗಳು: ವಾರ್ತಾಭಾರತಿ
ಅನುಭಾವೀ ಪ್ರೇಮದ ಅತ್ಯುತ್ತಮ ಕವಿತೆಗಳು
'ಹಕ್ಕಿ ಹಾಡಿದಂತೆಯೇ ನನಗೂ ಹಾಡುವ ಬಯಕೆಯಿದೆ. ಯಾರು ಕೇಳುತ್ತಾರೆ ಅಥವಾ ಯಾರು ಏನನ್ನ ಬಹುದೆಂದು ನಾನು ಯೋಚಿಸುವುದಿಲ್ಲ' ಎನ್ನುವ ಪರ್ಷಿಯನ್ ಕವಿ ಜಲಾಲುದ್ದೀನ್ ರೂಮಿ, ಅಧ್ಯಾತ್ಮಿಕ ಅನುಭೂತಿ ಮತ್ತು ಪ್ರೇಮದ ಮಹತ್ವವನ್ನು ಜಗತ್ತಿಗೆ ಸಾರಿದವನು. 'ರೂಮಿ ಮತ್ತು ಶಂಸ್ ನಡುವಿನ ಸಖ್ಯದ ಅಖ್ಯಾನದಲ್ಲಿ ಜಗತ್ತಿನ ಅನುಭಾವೀ ಪ್ರೇಮದ ಅತ್ಯುತ್ತಮ ಕವಿತೆಗಳಿವೆ' ಎನ್ನುವುದು ಡಿ.ಆರ್.ನಾಗರಾಜ್ ಮಾತು. ಈ ರೂಮಿಯ ಕವಿತೆಗಳನ್ನು ಉದಯಕುಮಾರ್ ಹಬ್ಬು ಕನ್ನಡಕ್ಕೆ ತಂದಿದ್ದು, ಕನ್ನಡ ಓದುಗರ ಅಧ್ಯಾತ್ಮ ವಿಕಸನಕ್ಕೆ ನೆರವಾಗಿದ್ದಾರೆ. 'ನನಗೆ ರೂಮಿಯಲ್ಲಿ ಬೌದ್ಧ ನಾಗಾರ್ಜುನನ ಶೂನ್ಯತೆ ಕಲ್ಪನೆಯು ಕಂಡು ಬಂದಿದೆ. ಉಪನಿಷತ್ತಿನ ಅದ್ವೈತ ಸಿದ್ಧಾಂತವೂ ರೂಮಿಯ ಕವಿತೆಗಳಲ್ಲಿ ಕಾಣಬಹುದಾಗಿದೆ. ಅಂತಿಮವಾಗಿ ಎಲ್ಲ ಧರ್ಮ ತತ್ವವೂ ಒಬ್ಬ ದೇವನ ಕುರಿತಾಗಿ ಮತ್ತು ಅವನೊಡನೆ ಐಕ್ಯಗೊಳ್ಳುವ ಅದ್ವೈತವೇ ಆಗಿ ಇವೆಲ್ಲ ರೂಮಿಯ ಕವಿತೆಗಳಲ್ಲಿ ಅಭಿವ್ಯಕ್ತಿಗೊಂಡಿವೆ. ಈ ಸಂಕಲನವು ಸೂಫಿ ತತ್ವಶಾಸ್ತ್ರವನ್ನು ಅರಿಯಲು ಒಂದು ಮೆಟ್ಟಿಲಾಗಿ ಖಂಡಿತಕ್ಕೂ ಸಹಕಾರಿ,' ಎನ್ನುವುದು ಅನುವಾದಕರ ಅಭಿಮತ.
'ನೀನು ಮುಳ್ಳುಗಳಿಂದ ಗಾಯಗೊಂಡರೆ, ಅದನ್ನು ನೀನು ನೆಟ್ಟದ್ದು; ಮತ್ತು ನೀನು/ ಸೆಟಿನ್ ಮತ್ತು ಸಿಲ್ಕಿನ ಬಟ್ಟೆ ತೊಟ್ಟರೆ, ನೀನೇ ಅದನ್ನು ನೇಯ್ದವನು' ಎನ್ನುವ ರೂಮಿಯ ಕವಿತೆಯೊಂದರ ಸಾಲು ನಮ್ಮ ವಚನಗಳಂತೆಯೇ ಬೆಳಕಿನ ಬೀಜಗಳನ್ನು ಓದುಗನಿಗೆ ದಾಟಿಸುತ್ತಿದೆ. ಸುಮಾರು 52 ರೂಮಿ ಕವಿತೆಗಳನ್ನು ಇಲ್ಲಿ ಅನುವಾದಿಸಲಾಗಿದ್ದು, ಕವಿತೆಯ ಕೊನೆಯಲ್ಲಿ ಅದರ ಸಾರವನ್ನು ವಿವರಿಸುವಂಥ ಟಿಪ್ಪಣಿಗಳನ್ನು ಅನುವಾದಕರು ಬರೆದಿದ್ದಾರೆ. ರೂಮಿಯನ್ನು ದಕ್ಕಿಸಿಕೊಳ್ಳಲು ಈ ಕಿರುಪುಸ್ತಕವೊಂದು ಮೆಟ್ಟಿಲು.
ಹ.ಚ.ನಟೇಶ ಬಾಬು
©2024 Book Brahma Private Limited.