ಕನ್ನಡ ಜೀವಭಾವದ ಕವಿ ನಾಗತಿಹಳ್ಳಿ ರಮೇಶ ಅವರ ಕನಸಂಕಲನ ‘ಸಮುದ್ರ ಮತ್ತು ಮಳೆ’ಯ ಹಿಂದಿ ಅನುವಾದವೇ ‘ಸಾಗರ್ ಔರ್ ಬಾರಿಶ್’. ನೆಲಮೂಲದ ಕವಿತೆಗಳನ್ನು ಕನ್ನಡದಿಂದ ಹಿಂದೀಭಾಷೆಗೆ ಅಷ್ಟೇ ಸಮರ್ಥವಾಗಿ ಅನುವಾದಿಸಲಾಗಿದೆ. ಇಲ್ಲಿಯ ಕವಿತೆಗಳು ತಾಯಿ, ಮಮತೆ, ಕರುಣೆ, ಪ್ರೀತಿ, ನೆಲ, ಜಲ, ಸಂಬಂಧಗಳ ಕುರಿತಾಗಿದ್ದು ಈ ಕೃತಿಯ ಓದು ಒಂದು ಭಾವಯಾನದಂತೆ. ಈ ಕೃತಿಯ ಕೇಂದ್ರವಸ್ತು ತಾಯಿ. ಇಲ್ಲಿಯ ಎಲ್ಲ ಕವಿತೆಗಳಲ್ಲಿ ತಾಯಿ, ಅವಳ ಪ್ರೀತಿ, ತ್ಯಾಗ, ಕರುಣೆ ಇದ್ದೇ ಇದೆ. ಅಲ್ಲದೇ, ಈ ಕವಿತೆಗಳಲ್ಲಿ ಬುದ್ಧ, ಅಲ್ಲಮ, ಬಸವ, ಜಿಬ್ರಾನ್, ಚಾರ್ಲಿ, ದೇವನೂರು ಸೇರಿದಂತೆ ಹಲವಾರು ಗಣ್ಯರು ಕಣ್ಣೆದುರಿಗೆ ಬರುತ್ತಾರೆ. ತುಂಬ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಮುದ್ರಣವೂ ಈ ಕೃತಿಯನ್ನು ಇನ್ನಷ್ಟು ಮೌಲ್ಯಯುತವಾಗಿಸಿದೆ. ಉಸ್ಮನಾಬಾದ ವಿವಿಯ ಡಾ. ವೇದಕುಮಾರ ವೇದಾಲಂಕಾರ ಅವರ ಮುನ್ನುಡಿ ಮತ್ತು ಡಿ. ಆರ್. ತುಕಾರಾಂ ಅವರ ಮೆಚ್ಚುಗೆಯ ಮಾತುಗಳು ಈ ಕೃತಿಗೆ ಲಭಿಸಿವೆ.
©2025 Book Brahma Private Limited.