ಕಾಳಿದಾಸನ ಮೇಘದೂತವು ಛಂದಸ್ಸು ಮತ್ತು ವರ್ಣಕಥನವನ್ನು ಜೋಡಿಯಾಗಿ ಹಿಡಿದಿದೆ ನಾರಾಯಣ ಘಟ್ಟರ ಮೇಘದೂತ ಕೃತಿ.
ಮಿಂಚನುಳ್ಳ ಎಳೆವಿಂಡಿರುಳ್ಳ ಮಳೆಬಿಲ್ಲ ಬಣ್ಣ ತಾಳಿ
ಹಾಡಿಗಾಗಿ ಗುಡುಗುಡುಗಿದಂತೆ ಮದ್ದಲೆಯ ಸೊಲ್ಲ ಕೇಳಿ
ಇದು ಉತ್ತರಮೇಘದ ಮೊದಲ ಶ್ಲೋಕದ ಪೂರ್ವಾಧದ ಅನುವಾದವಷ್ಟೆ. ಇಲ್ಲಿ ಲಯವೇ ಪ್ರಾಧಾನ್ಯ. ವರ್ಣಕಥನವು ಲಯದೊಡನೆ ಬೆರೆತು ಅವಿಸ್ಮರಣೀಯವಾದ ಭಾವವ್ನು ನಮಗೆ ಉಂಟುಮಾಡುತ್ತದೆ. ಕನ್ನಡದ ನುಡಿಗಳು ಇಲ್ಲಿ ತಾನು ಮೊದಲು, ತಾನು ಮೊದಲೆಂದು ಮಯಗೂಡಿ ಬರುತ್ತವೆ. ಈ ಭಾಗವನ್ನು ನಾರಾಯಣ ಘಟ್ಟ ಅವರು ಮಾಡಿರುವ ಅನುವಾದದ ಜೊತೆಗಿಟ್ಟು ನೋಡಬಹುದು. ಇಂತಹ ಹಲವಾರು ಶ್ಲೋಕಗಳು, ಅದರ ಭಾವಾರ್ಥಗಳು ಈ ಕೃತಿಯಲ್ಲಿವೆ.
©2024 Book Brahma Private Limited.