ಲೇಖಕ ಡಾ. ಸರಜೂ ಕಾಟ್ಕರ್ ಅವರು ಕನ್ನಡಕ್ಕೆ ಅನುವಾದಿಸಿದ ಪುಸ್ತಕ “ಅಟಲ್ ಬಿಹಾರಿ ವಾಜಪೇಯಿ ಕವಿತೆಗಳು”. ಭಾರತದ ಮಾಜಿ ಪ್ರದಾನಿ ವಾಜಪೇಯಿ ಅವರು ಒಬ್ಬ ಕವಿ ಕೂಡಾ. ಹಿಂದಿ, ಇಂಗ್ಲೀಷ್ ಹಾಗೂ ಸಂಸ್ಕೃತ ಭಾಷೆಗಳಲ್ಲಿ ಪಾಂಡಿತ್ಯಗಳಿಸಿದ್ದ ಅವರು ಸಹಜವಾಗಿಯೇ ಸಾಹಿತ್ಯದ ಮೇಲೆ ಅತಿಯಾದ ಆಸಕ್ತಿಯನ್ನು ಹೊಂದಿದ್ದರು. ತಮ್ಮ ಮಾತೃಭಾಷೆ ಹಿಂದಿಯಲ್ಲಿ ಅನೇಕ ಕಥೆ, ಕವನಗಳನ್ನೂ ಬರೆದಿದ್ದಾರೆ. ಮೇರಿ ಇಕಿವಾನಾ ಕವಿತೆಮ್ (1995), ನಾಯಿ ದೀಸಾ - (ಜಗ್ಜಿತ್ ಸಿಂಗ್ ಅವರೊಂದಿಗೆ ಒಂದು ಆಲ್ಬಮ್) (1995), ಶ್ರೀತಾ ಕಬಿತಾ (1997), ಹಾಗೂ ಸಂವೇದನ ಇವರು ಬರೆದ ಕವನಗಳಾಗಿವೆ. ಈ ಕವನಗಳನ್ನು ಲೇಖಕ ಸರಜೂ ಅವರು ಕನ್ನಡ ಭಾಷೆಗೆ ಪರಿವರ್ತನೆ ಮಾಡಿ ಸೊಗಸಾಗಿ ಕೊಟ್ಟಿದ್ದಾರೆ.
©2025 Book Brahma Private Limited.