’ಕವಿತೆಯೆಂಬುದು ಪ್ರೀತಿಯ ಕೂಸು’ ಹೆಸರಿನಲ್ಲಿ ರಷ್ಯಾದ ಪ್ರಮುಖ ಕವಯತ್ರಿ ಮರೀನಾ ಸ್ವೆತಯೇವಾ ಅವರ ಕವನಗಳನ್ನು ಕನ್ನಡಕ್ಕೆ ತಂದಿದ್ದಾರೆ ಕವಿ, ಪತ್ರಕರ್ತ ಎಸ್. ಕುಮಾರ್.
ಮರೀನಾ ಅವಳದು ಕಡು ವ್ಯಾಮೋಹದ ಕಾವ್ಯ. ಆಕೆ ಮಾಸ್ಕೋ ಕ್ರಾಂತಿಯ ಅವಧಿಯಲ್ಲಿ ಬದುಕಿದ್ದವಳು. ಒಂಟಿತನ ಬೆನ್ನಿಗಿತ್ತು. ಜೊತೆಗೆ ಕಾವ್ಯದ ಸಂಗವೂ ಇತ್ತು. ’ನಾನು ಕವಿತೆಗಳನ್ನು ಬರೆಯಲಾಗದ ದಿನ ಹೇಗಿರುತ್ತೇನೆ ಎಂಬುದು ಬಲ್ಲೆ ಆ ದಿನ ನಾನು ಬದುಕಿರುವುದಿಲ್ಲ ಸಾಯುತ್ತೇನೆ' ಎನ್ನುತ್ತಾಳೆ ಅವಳು.
ಹಿರಿಯ ವಿಮರ್ಶಕ ಎಚ್.ಎಸ್. ರಾಘವೇಂದ್ರ ರಾವ್ ಅವರು ಇಲ್ಲಿನ ಕವಿತೆಗಳ ಕುರಿತು ಆಡಿರುವ ಮಾತುಗಳು ಹೀಗಿವೆ: 'ಈ ಕವಿತೆಗಳಲ್ಲಿ ಇರುವುದು ಅರ್ಥದ ಭಾಷೆಯಲ್ಲ, ಭಾವನೆ, ವಿಚಾರಗಳ ಭಾಷೆ. ಹಸಿದು ಸತ್ತ ಮಗಳು, ಕಣ್ಮರೆಯಾದ ಗಂಡ, ಆಮೇಲೂ ಬದುಕಿನಲ್ಲಿ ಎಷ್ಟೊಂದು ವ್ಯಥೆಗಳು, ಆತ್ಮಹತ್ಯೆಗೆ ಶರಣಾದ ಈ ಜೀವ, ಬದುಕಿರುವ ತನಕ ಕಾವ್ಯವನ್ನೇ ಉಸಿರಾಡಿತು ಎಂದು ಹೇಳುತ್ತಾರೆ. ಒಂದು ದಿನ, ಬೇಸಗೆಯ ಒಣ ಉಸಿರಿನಲಿ ಫಸಲಿನಂಚಿನಲ್ಲಿ ಅನ್ಯಮನಸ್ಕನಾಗಿ, ಸಾವು ಹೂ ಕೀಳವುದು ಅದು ನಾನೇ!' ಎನ್ನುವ ಕವಿತೆಯ ಸಾಲುಗಳು ಓದುಗರನ್ನು ಹಿಡಿದಿಟ್ಟುಕೊಂಡಿದೆ.
©2024 Book Brahma Private Limited.