ರಾಜಶೇಖರ ಕವಿಯ ಮೂಲ ಸಂಸ್ಕೃತ ಗ್ರಂಥವನ್ನು ಡಾ. ಕೆ.ಕೃಷ್ಣಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದೇ ಈ ಕೃತಿ. ಪೀಠಿಕೆ, ಮೂಲ ಭಾಷಾಂತರ, ಅಡಿಟಿಪ್ಪಣೆ ಹಾಗೂ ಸೂಚಿಗಳನ್ನೂ ಸಹ ಅಧ್ಯಯನದ ಅನುಕೂಲಕ್ಕಾಗಿ ನೀಡಲಾಗಿದೆ. ಕವಿಯಾಗಬೇಕು ಎನ್ನುವವರಿಗೆ, ರಸಿಕತೆ ಪಡೆಯಬೇಕು ಎನ್ನುವವರಿಗೆ ಕವಿ ರಾಜಶೇಖರನು ಮಾರ್ಗದರ್ಶನ ಮಾಡಿದವರಲ್ಲಿ ಮೊದಲಿಗ. ಇಲ್ಲಿ ಶಾಸ್ತ್ರದ ಗಹನ ಜಟಿಲ ತತ್ವಗಳಿಲ್ಲ. ತರ್ಕದ ಕರ್ಕಶ ವಿವಾದಗಳಿಲ್ಲ. ಇಲ್ಲಿ ಕಥೆ ಇದೆ. ಐತಿಹ್ಯವಿದೆ. ಇತಿಹಾಸವಿದೆ. ಕುಕವಿಯಿಂದ ಸುಕವಿಯವರೆಗೆ ಎಷ್ಟು ಬಗೆಯ ಕವಿಗಳಿರಬಹುದು? ಕಾವ್ಯದ ಪ್ರಕಾರಗಳೆಷ್ಟು?, ಸಾಹಿತ್ಯ ಅಂಶವೇನು? ಇಂತಹ ಪ್ರಶ್ನೆಗಳು ರಾಜಶೇಖರ ಗಂಭೀರವಾಗಿ ಚರ್ಚೆಗೆ ಪ್ರೇರಣೆ ಇತ್ತಿದ್ದಾನೆ.
’ಡಾ. ಕೆ.ಕೃಷ್ಣಮೂರ್ತಿ ಅವರು ಈ ಕೃತಿಯನ್ನು ತಮ್ಮ ವಾಗ್ವಿನ್ಯಾಸದ ಲಾಸ್ಯದಿಂದ ಓದುಗರಿಗೆ ಕಾವ್ಯ ಚಮತ್ಕಾರದ ದಿವ್ಯ ದರ್ಶನ ಮಾಡಿಸಿದ್ದಾರೆ’ ಎಂದು ಕೃತಿಯ ಮುನ್ನುಡಿ ಬರೆದ ಡಾ. ಕೆ. ಲೀಲಾ ಪ್ರಕಾಶ್ ಅವರು ಪ್ರಶಂಸಿಸಿದ್ದಾರೆ.
©2025 Book Brahma Private Limited.