ಗೋಬಿಂದ ಪ್ರಸಾದ ಅವರ ಆಯ್ದ ಹಿಂದಿ ಕವಿತೆಗಳನ್ನು ಲೇಖಕಿ ಶೋಭಾ ನಾಯಕ ಅವರು ಅನುವಾದಿಸಿದ ಕೃತಿ ‘ವರ್ತಮಾನದ ಧೂಳು’. ಕೃತಿಗೆ ಬೆನ್ನುಡಿ ಬರೆದ ಪುರುಷೋತ್ತಮ ಬಿಳಿಮಲೆ ಅವರು ‘ವರ್ತಮಾನ ಕಾಲದ ಭಾರತವು ಬಗೆ ಬಗೆಯ ಬಿಕ್ಕಟ್ಟುಗಳಿಂದ ನರಳುತ್ತಿದೆ, ದ್ವೇಷ, ನಿರಾಸೆ, ಸಿನಿಕತನ, ಕೋಮುವಾದ, ಜಾತೀಯತೆ, ಮತಾಂಧತೆ, ಹೋರಾಟ ಮತ್ತಿತರ ಸಮಸ್ಯೆಗಳ ನಡುವೆ ಭಾರತೀಯರು ನಲುಗಿ ಹೋಗುತ್ತಿದ್ದಾರೆ. ಇಂಥ ಸಂಕೀರ್ಣ ಪರಿಸ್ಥಿತಿಯಲ್ಲಿ ಗೋಬಿಂದ ಪ್ರಸಾದರ ಕವಿತೆಗಳು ಆಶಾವಾದ, ನಂಬುಗೆ ಆಪ್ತತೆ ಮತ್ತು ಪ್ರೀತಿಯನ್ನು ಸೃಷ್ಠಿಸಲು ನೆರವಾಗುತ್ತವೆ. ನಮ್ಮನ್ನು ಆವರಿಸಿಕೊಂಡಿರುವ ಮಡಿ ಮತ್ತು ಮೈಲಿಗೆಗಳೆರಡನ್ನೂ ಕಳೆದು ಹಾಕಲು ಅವರ ಕವಿತೆಗಳು ತವಕಿಸುತ್ತವೆ.’ ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.