ನೊಬೆಲ್ ಪ್ರಶಸ್ತಿ ಪುರಸ್ಕೃತ ಕೃತಿ ‘ಗೀತಾಂಜಲಿ’ಯನ್ನು ಇಂಗ್ಲಿಷ್ ಪಠ್ಯ ಸಮೇತ ಇರುವ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದವರು ಮಹಿಪಾಲ ದೇಸಾಯಿ. ಪ್ರಕೃತಿ-ದೇಶಪ್ರೇಮ-ಅಧ್ಯಾತ್ಮ ಹೀಗೆ ವಿವಿಧ ಪರಿಕಲ್ಪನೆಗಳ ಭಾವದ ಮೊತ್ತವಾಗಿರುವ ಗೀತಾಂಜಲಿಯು ಕಾವ್ಯ ವಲಯದ ಪರಿಶುದ್ಧ ಸಾಹಿತ್ಯವಾಗಿದೆ.
ಎಲ್ಲರೊಳಗಿರುವ ಒಂದೇ ಆತ್ಮದ ಭಾಗವಾಗಿ ಇಲ್ಲವೇ ಪ್ರತಿರೂಪದಂತೆ ಕಾಣುವ, ಅನುಭವಕ್ಕೆ ಬರುವ ಇಲ್ಲಿಯ ಕವಿತೆಗಳು, ಉನ್ನತ ಜೀವನ ಮೌಲ್ಯಗಳನ್ನು ಹಾಗೂ ಸೌಂದರ್ಯವನ್ನು ಒಳಗೊಂಡಿವೆ. ಹೀಗಾಗಿ, ಇಂತಹ ಕಾವ್ಯಗಳನ್ನು ಓದಿದಾಗ, ಮನಸ್ಸು ಆತ್ಮದ ಅನುಭೂತಿ ಹಾಗೂ ಸಂತೃಪ್ತ ಭಾವ ಅನುಭವಿಸುತ್ತದೆ.
©2025 Book Brahma Private Limited.