‘ಕಾಡು ಹುವ್ವು’ ಅನುವಾದಿತ ಕವಿತೆಗಳ ಸಂಕಲನ. ಕನಡದ ಲೇಖಕರು ತಾವು ಓದಿದ ಇತರೆ ಭಾಷೆಯ ಕವಿಗಳ ಬರಹಗಳನ್ನು ಇತರ ಓದುಗರು ಓದಲಿ ಎಂಬ ಉದ್ದೇಶದಿಂದ ತಮ್ಮ ಅನುವಾದಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸುತ್ತಾರೆ. ಅವುಗಳು ಎಲ್ಲಾ ಓದುಗರ ಗಮನಕ್ಕೆ ಬಾರದೆ ಆ ಉಳಿಯುವ ಸಂಭವವೇ ಹೆಚ್ಚು. ಆ ರೀತಿ ಆಗಬಾರದು ಎಂಬ ಉದ್ದೇಶದಿಂದ ಅವುಗಳಲ್ಲಿ ಮುಖ್ಯವಾದವುಗಳನ್ನು ಆಯ್ಕೆಮಾಡಿ ಇಂತಹ ಸಂಕಲನ ಉಳಿಸಿಕೊಳ್ಳುವುದು ಈ ಯೋಜನೆಯ ಮುಖ್ಯ ಉದ್ದೇಶ. ಇಲ್ಲಿನ ಅನುವಾದ ಕವಿತೆಗಳನ್ನು ಅನುವಾದಕರೇ ಸ್ವಇಚ್ಛೆಯಿಂದ ಆರಿಸಿ ಅನುವಾದಿಸಿರಬಹುದು. ಆಯ್ಕೆ, ಅನುವಾದಕ್ಕೆ ಬೇಕಾದ ಭಾಷೆ, ಇವೆಲ್ಲವೂ ಅನುವಾದಕರೇ ನಿರ್ಧರಿಸಿ ಕೊಂಡಿರುತ್ತಾರೆ. ಜೊತೆಗೆ ಅನುವಾದದ ಹಿಂದೆ ಸಮಕಾಲೀನವಾದ ಒತ್ತಡಗಳ ಪ್ರಭಾವವೂ ಇರುತ್ತದೆ. ಏನೇ ಆಗಲಿ ಈ ಬಗೆಯ ಸಂಕಲನಗಳಿಂದ ಹಲವು ಬಗೆಯ ಉಪಯೋಗವಿದೆಯೆಂಬುದು ಸ್ಪಷ್ಟ.
ಇಂತಹ ಸಂಕಲನವನ್ನು ಸಿದ್ಧಪಡಿಸುವುದು ಸುಲಭವಾದ ಕೆಲಸವಲ್ಲ. ಇಡೀ ವರ್ಷದ ಪತ್ರಿಕೆಗಳನ್ನು ಗಮನಿಸಿ ಅವುಗಳನ್ನು ಕೂಡಿಟ್ಟು ಎಚ್ಚರದಿಂದ ಓದಿ ಅನುವಾದಕರನ್ನು ಸಂಪರ್ಕಿಸಿ, ಒಪ್ಪಿಗೆ ಪಡೆದು, ಸಂಕಲನವನ್ನು ಸಿದ್ಧಪಡಿಸಬೇಕು. ಸಂಪಾದಕರು ಈ ಕೆಲಸವನ್ನು ಎಚ್ಚರದಿಂದ ನಿರ್ವಹಿಸಿದ್ದಾರೆ. ಅವರ ಕಣ್ಣಪ್ಪಿ ಕೆಲವು ಕವಿತೆಗಳು ಈ ಸಂಕಲನದಲ್ಲಿ ಸೇರದೆ ಇರಬಹುದು. ಅವು ಈ ಸಂಕಲನದಲ್ಲಿ ಸೇರಲೇ ಬೇಕಾಗಿದ್ದಿರಬಹುದು. ನಿಗದಿಯಾದ ಅವಧಿಯಲ್ಲಿ ಇಂತಹ ಸಂಕಲನಗಳು ಸಿದ್ದಗೊಳ್ಳುವಾಗ ಕೆಲವು ಕೊರತೆಗಳು ಇರುವುದು ಸಹಜ. ಆದರೆ ಚೀಮನಹಳ್ಳಿ ರಮೇಶ್ ಬಾಬು ಅವರು ಆಸಕ್ತಿ ಮತ್ತು ಶ್ರಮವಹಿಸಿ ಈ ಸಂಕಲನವನ್ನು ಸಿದ್ದಪಡಿಸಿದ್ದಾರೆ.
©2024 Book Brahma Private Limited.