ಮಹಾರಾಷ್ಟ್ರದ ಕವಿ ಯೋಗೇಶ್ ಮೈತ್ರೇಯಾ ಅವರ ಐವತ್ತೈದು ಕವನಗಳನ್ನು ಕವಿ ಸಂವರ್ತ ಸಾಹಿಲ್ ಕನ್ನಡಕ್ಕೆ ಅನುವಾದಿಸಿದ ಕೃತಿ ಇದು. ಅಂತರಂಗದ ಉದ್ವೇಗಗಳನ್ನು ಮೃದುವಾಗಿ ಹೇಳುತ್ತಾ ನಮ್ಮನ್ನು ‘ಓದುವುದೆಂದರೆ ಸ್ಪರ್ಶಿಸಿದಂತೆ’ ಎದುರಾಗುತ್ತವೆ. ಕವಿ ಎಚ್. ಎಸ್. ಶಿವಪ್ರಕಾಶ್ ಕೃತಿಯ ಬೆನ್ನುಡಿಯಲ್ಲಿ’ಕೆಂಡದುಂಡೆಯಂತಹ ಕವಿತೆಗಳನ್ನು ಕನ್ನಡಕ್ಕೆ ಒಗ್ಗುವ ಹಾಗೆ ಸಂವರ್ತ ಸಾಹಿಲ್ ಅನುವಾದಿಸಿದ್ದಾರೆ. ಅಸ್ಪಶ್ಯತೆಯ ನಾಡಿನಲ್ಲಿ, ಕಾಮಭಂಜಕರ ಕಾಲದಲ್ಲಿ, ಮೈಮನಗಳ ದೂರವನ್ನು ಮೃದುಲ ಸೂರಿನಿಂದ, ಕಾಮದ ಉದ್ರೇಕದಿಂದ, ಮಾತಿನ ತಾಗುಗಳಿಂದ ಗೆಲ್ಲಲು ಹೊರಟಿರುವ ಈ ಕವಿತೆಗಳ ಬಗೆ ಹೊಸದು ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.