ನಗ್ನಮುನಿ ಮಾತು-ಕವಿತೆಯನ್ನು ಕನ್ನಡಕ್ಕೆ ಅನುವಾದಿಸಿರುವ ಡಾ. ಎಚ್. ಎಸ್. ಅನುಪಮಾ ಅವರು ಈ ಪುಸ್ತಕಕ್ಕೆ ’ಮರಗುದುರೆ’ ಎಂಬ ಶೀರ್ಷಿಕೆಯನ್ನಿಟ್ಟಿದ್ಧಾರೆ.
ಸಾಮಾನ್ಯ ಅರ್ಥದಲ್ಲಿ ನಗ್ನತೆಯೆಂದರೆ ಬಟ್ಟೆ ತೊಡದಿರುವಿಕೆ ಆದರೆ ತಾತ್ವಿಕವಾಗಿ ನಗ್ನತೆಯೆಂದರೆ ಬಟ್ಟೆಯಿಲ್ಲದಿರುವಿಕೆಯಲ್ಲ. ನಗ್ನತೆಯೆಂದರೆ ಮುಕ್ತತೆ. ಮನುಷ್ಟ ಕ್ರೌರ್ಯವಿರಲಿ ನಿಸರ್ಗ ವಿಕೋಪವೇ ಇರಲಿ ಎಂದಿದ್ದರೂ ಮುರಿಯುವುದು ಹೆಲಿಕಾಪ್ಟರಿನಿಂದ ನೋಡಿ ವಿಮಾನದಿಂದಲಾದರೂ ನೋಡಿ ಕಾರೊಳಗೆ ಅಡಗಿ ಕುಳಿತು ಹೊರಗಿಣುಕಿ ನೋಡಿ ತಲೆಮೇಲಿನ ಟೋಪಿ ಸಂದಿಯಿಂದ ನ್ಯೂಸ್ ಪೇಪರ್ ಹೆಡ್ಲೈನುಗಳಲಿ ಹಣಕಿಕ್ಕಿ ನೋಡಿ ಕಾಣುವುದು ಒಂದೇ – ಬಡವನ ಎಲುಬುಗಳು ಬಿದ್ದ ಗುಡಿಸಲು, ಹೆಣಗಳು. ಕರುಣೆ, ಪ್ರೀತಿಯಿಂದ ನೋಡಿದರೂ; ಮೋಸ, ದಗಾಗಳ ಬಚ್ಚಿಟ್ಟು ಸಹಾಯಹಸ್ತದ ವೇಷ ತೊಟ್ಟು ಹೋದರೂ; ಬಳಿ ನಿಂತು ಅಲುಗಾಡಿಸಿದರೂ ಕಾಣುವುದು ಅದೊಂದೇ. ಮೌನ ರೋದನದ ಚಿತ್ರಗಳು, ಹೀಗೆ ಇಂತಹ ಅನೇಕ ವಸ್ತು ವಿಷಯಗಳನ್ನು ಈ ಕೃತಿ ಒಳಗೊಂಡಿದೆ.
©2025 Book Brahma Private Limited.