ಪಾಶ್ ಕವಿತೆಗಳು- ಶೋಷಿತ ವ್ಯವಸ್ಥೆಯ ವಿರುದ್ಧ ಹೋರಾಡಿದ ಪಂಜಾಬಿನ ಪ್ರಮುಖ ಕವಿ ಪಾಶ್ ಅವರ ಕವನಗಳನ್ನು ಕಾಶೀನಾಥ ಅಂಬಲಗೆ ಅವರು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ . ಪಾಶ್ ಅಪ್ಪಟ ಹೋರಾಟಗಾರ, ತೋರಿಕೆಗಳಿಂದ ದೂರವೇ ಉಳಿದಿದ್ದ ಪಾಶ್ , ಕವಿತೆಗಳಲ್ಲಿ ಅಭಿವ್ಯಕ್ತಿಯ ತೀವ್ರತೆಯ ಜೊತೆಗೆ, ಹೆಚ್ಚೆಚ್ಚು ಪಾರದರ್ಶಕವಾಗಿ ಬರೆಯುತ್ತಿದ್ದ ಕವಿ. ಅಧಿಕಾರಶಾಹಿ ವ್ಯವಸ್ಥೆಯ ವಿರುದ್ಧ, ಬಂಡವಾಳಶಾಹಿಗಳ ವಿರುದ್ಧ ತೀವ್ರವಾಗಿ ಬರೆಯುತ್ತಿದ್ದ ಪಾಶ್ ಸದಾ ದುಡಿವ ಜನರ, ಕೂಲಿಕಾರ್ಮಿಕರ ಪರ ಕಾವ್ಯದ ಮೂಲಕವೇ ಹೋರಾಟಕ್ಕಿಳಿಯುತ್ತಿದ್ದ. ಮೂಲಭೂತವಾದಿಗಳನ್ನು ಕಟುವಾಗಿ ವಿರೋಧಿಸುತ್ತಿದ್ದ ಪಾಶ್, ಒಂದು ಕವಿತೆಯಲ್ಲಿ ‘ಯಾವುದೇ ಧರ್ಮದ ಯಾವುದೇ ಗ್ರಂಥವು ನನ್ನ ಗಾಯಗೊಂಡ ತುಟಿಗಳ ಮೌನಕ್ಕಿಂತ ಬಹಳ ಪವಿತ್ರವೇನೂ ಇರುವುದಿಲ್ಲ’ ಎನ್ನುತ್ತಾನೆ. ಇಂತಹ 37 ಕವಿತೆಗಳನ್ನು ಈ ಪುಸ್ತಕದಲ್ಲಿ ಅಷ್ಟೇ ಗಾಢವಾಗಿ ಕಾಶೀನಾಥ ಅಂಬಲಗೆ ಅವರು ಅನುವಾದಿಸಿದ್ದಾರೆ.
©2024 Book Brahma Private Limited.