‘ಗಜಲ್ ಘಲ್ ಘಲ್’ ಕಾಶೀನಾಥ ಅಂಬಲಗೆ ಅವರ ಅನುವಾದಿತ ಗಜಲ್ ಸಂಕಲನ. ಕನ್ನಡ ಗಜಲುಗಳ ಪರಂಪರೆಯಲ್ಲಿ ಶಾಂತರಸರದು ಒಂದು ಘಟ್ಟವಾದರೆ ಕಾಶೀನಾಥ ಅಂಬಲಗೆಯವರದು ಇನ್ನೊಂದು ಘಟ್ಟ, ಕನ್ನಡ ಗಜಲ್ ಪರಂಪರೆ ಈ ಇಬ್ಬರಿಂದ ಹಿಗ್ಗಿದೆ. ಭಿನ್ನ ಭಿನ್ನ ದಾರಿ ತುಳಿದಿದೆ. ಶಾಂತರಸರ ಗಜಲುಗಳು ಪ್ರೇಮದ ಉತ್ಸಾಹ, ವಿರಹವನ್ನು ಹಿಡಿದರೆ, ಅಂಬಲಗೆಯವರ ಗಜಲುಗಳು ಸಮುದಾಯದ ಆತಂಕಗಳಿಗೆ ದನಿಯಾಗಿವೆ ಎನ್ನುತ್ತಾರೆ ಲೇಖಕ ವಿಕ್ರಮ್ ವಿಸಾಜಿ.
ಈ ಪುಸ್ತಕದಲ್ಲಿ ಅಶೋಕ ಮಿಜಾಜ ಅವರ ಗಜಲುಗಳನ್ನು ಅಂಬಲಗೆ ಅವರು ಅನುವಾದಿಸಿದ್ದಾರೆ. ಅಂಬಲಗೆಯವರ ಕಾವ್ಯಗಳು ಅವರ ನಂಬಿಕೆಗೆ ಹತ್ತಿರದ್ದಾಗಿವೆ. ಅಂದರೆ ಮಾನವೀಯವಾದ ಪ್ರೇಮ, ಸಮುದಾಯದ ಬೇರೆ ಬೇರೆ ನೆಲೆಯಲ್ಲಿ ನಿಂತ ಮನುಷ್ಯ ಎದುರಿಸುತ್ತಿರುವ ಇಕ್ಕಟ್ಟುಗಳು, ಚಡಪಡಿಕೆಗಳು ಹಾಗೂ ಬಿಡುಗಡೆಗೊಳ್ಳಲು ಮಾಡುತ್ತಿರುವ ಪ್ರಯತ್ನಗಳು- ಈ ಎಲ್ಲವುಗಳ ಗುಚ್ಛವಾಗಿದೆ. ಮನುಷ್ಯತ್ವಕ್ಕೆ ಉಂಟಾದ ಗಾಯಗಳ ನೋವು ಈ ಗಜಲುಗಳಲ್ಲಿದೆ. ಸ್ವತಃ ಕವಿಯಾಗಿರುವ ಅಂಬಲಗೆಯವರು ತಮ್ಮದೇ ರಚನೆಗಳು ಎಂಬಷ್ಟು ಆಸಕ್ತಿಯಿಂದ ಅನುವಾದಿಸಿದ್ದಾರೆ.
©2024 Book Brahma Private Limited.