ಲೇಖಕ ಕಬ್ಬಿನಾಲೆ ವಸಂತ ಭಾರದ್ವಾಜ ಅವರ ಅನುವಾದಿತ ಕವನ ಸಂಕಲನ ಹೊಸದಿಕ್ಕಿನ ಹಾಡು. ಪದ್ಮಶ್ರೀ ಕವಿಗಳು ಡಾ. ದೊಡ್ಡರಂಗೇಗೌಡ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ‘ಹೊಸದಿಕ್ಕಿನ ಹಾಡು ಮೂಲಕೃತಿಯನ್ನು ಸೃಜಿಸಿದ ಮಹನೀಯರು ನಮ್ಮ ಭವ್ಯ ಭಾರತದ ಮಹಾನ್ ಪ್ರಧಾನಿ ನರೇಂದ್ರ ಮೋದಿ ಅವರು. ಮೂಲತಃ ಕವಿ ಮನೋಧರ್ಮದವರು. ಸಂಸ್ಕೃತಿಯ ಸಾರಸರ್ವಸ್ವವನ್ನು ಅರಿತವರು. ಜಗತ್ತಿನ ಇಂದಿನ ರಾಜಕಾರಣದಲ್ಲಿ ಅಗ್ರಮಾನ್ಯ ಪಂಕ್ತಿಯಲ್ಲಿ ತಮ್ಮ ವಿನೂತನ ಕಾಣ್ಕೆಗಳಿಂದ ಹೆಸರು ಪಡೆದವರು. ಅವರು ಆಧುನಿಕ ಚಾಣಕ್ಯ!ವೈಜ್ಞಾನಿಕ ಭಾರತದ ರೂವಾರಿ, ದಾರ್ಶನಿಕ! ನವಭಾರತದ ನಿಂಆðಣದ ಕನಸನ್ನು ಸಾಕಾರ ಮಾಡಲು ಹೊರಟ ರಾಜಕೀಯ ಮುತ್ಸದ್ದಿ. ಅಂಥ ಹಿರಿಯ ಜೀವ ಆಗಾಗ ಬಿಡುವಿನ ವೇಳೆಯಲ್ಲಿ ಕವಿತೆಗಳನ್ನು ಬರೆದಿದ್ದಾರೆ ಎಂಬುದೇ ಹೆಮ್ಮೆಯ ವಿಷಯ. ಈ ಕವಿತೆಗಳನ್ನು ಅನುವಾದಿಸಿದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಅವರು ಮೂಲತಃ ಒಳ್ಳೆಯ ಕವಿಗಳು; ವಿದ್ವನ್ಮಣಿಗಳು. ಕನ್ನಡ ಭಾಷೆಯ ಆಮೂಲಾಗ್ರ ಸತ್ವವನ್ನು ತಿಳಿದವರು. ಕಾವ್ಯಪರಂಪರೆಯನ್ನು ಚೆನ್ನಾಗಿ ಬಲ್ಲವರು. ನಮ್ಮ ಪ್ರೀತಿಯ ಕನ್ನಡದ ಜಾಯಮಾನವನ್ನು ಅರಿತ ನುಡಿನಿಮಣರು, ಅವಧಾನಕಲಾಪ್ರವೀಣರು. ಛಂದಸ್ಸಿನ ಬಗೆಗೆ ತಲಸ್ಪರ್ಶಿ ಜ್ಞಾನಹೊಂದಿದೆ. ಬಹುಶ್ರುತ ಪಂಡಿತರು. ಮೂರು ಮಹಾಕಾವ್ಯಗಳನ್ನು ಸೃಷ್ಟಿಸಿದ ಮಹಾಕವಿಗಳು. ನಮ್ಮ ಕನ್ನಡದ ಕಣ್ವರ್ಷಿ ಬಿ.ಎಂ.ಶ್ರೀ ಅವರು 'ಇಂಗ್ಲಿಷ್ ಳನ್ನು ಕನ್ನಡಕ್ಕೆ ಸಮರ್ಪಕವಾಗಿ ಕೊಟ್ಟಂತೆ ಇಲ್ಲೂ ಡಾ. ಕಬ್ಬಿನಾಲೆ ಅವರು 'ಶ್ರೀ' ಅವರು ಸಾಧಿಸಿದ ಔನ್ನತ್ಯವನ್ನೇ ಮೆರೆದಿದ್ದಾರೆ ಎಂಬುದಾಗಿ ಬೆನ್ನುಡಿಯಲ್ಲಿ ಬರೆದಿದ್ದಾರೆ.
©2024 Book Brahma Private Limited.