‘ನಿಜದ ನೆಲೆ’ ವಸಂತ ಬನ್ನಾಡಿ ಅವರ ರಚನೆಯ ಕವನ ಸಂಕಲನವಾಗಿದೆ. ವಸಂತ ಬನ್ನಾಡಿ ಅವರ 'ನಿಜದ ನೆಲೆ' ಕವನ ಸಂಗ್ರಹದ ಹೆಸರು ಸ್ವಲ್ಪ ಭಾರವೆನಿಸಿದರೂ ಕವನಗಳ ಓದು ದಟ್ಟವಾದ ಕಾವ್ಯಾನುಭವವನ್ನು ಉಂಟುಮಾಡುತ್ತದೆ. ಹಲವಾರು ಕವನಗಳಲ್ಲಿ ಸೂಕ್ಷ್ಮವಾದ ಚಿಂತನೆಗಳನ್ನು ಕಾಣಬಹುದು. ಬ್ರೆಕ್ಟ್‌ನ ಹಲವು ಕವನಗಳ ಉತ್ತಮ ಅನುವಾದ ಇಲ್ಲಿದೆ.
ಹೊಸತು- ಸೆಪ್ಟೆಂಬರ್-2005
ವಸಂತ ಬನ್ನಾಡಿ ಅವರ 'ನಿಜದ ನೆಲೆ' ಕವನ ಸಂಗ್ರಹದ ಹೆಸರು ಸ್ವಲ್ಪ ಭಾರವೆನಿಸಿದರೂ ಕವನಗಳ ಓದು ದಟ್ಟವಾದ ಕಾವ್ಯಾನುಭವವನ್ನು ಉಂಟುಮಾಡುತ್ತದೆ. ಹಲವಾರು ಕವನಗಳಲ್ಲಿ ಸೂಕ್ಷ್ಮವಾದ ಚಿಂತನೆಗಳನ್ನು ಕಾಣಬಹುದು. ಬ್ರೆಕ್ಟ್‌ನ ಹಲವು ಕವನಗಳ ಉತ್ತಮ ಅನುವಾದ ಇಲ್ಲಿದೆ. ಪುಸ್ತಕಕ್ಕೆ ಮುನ್ನುಡಿ ಬರೆದಿರುವ ಕೆ. ಫಣಿರಾಜ್ ಅವರು ಗುರುತಿಸಿರುವಂತೆ ಈ ಸಂಕಲನದ ಬಹುಪಾಲು ಪದ್ಯಗಳು ಭಾವ ಸ್ವಗತಗಳು. ಹಲವು ಕಿರುಕವಿತೆಗಳು ರಾಮಾನುಜನ್, ಲಂಕೇಶ್ ಅವರ ಪದ್ಯಗಳಂತೆ ಗಮನ ಸೆಳೆಯುತ್ತವೆ. ಆರೋಗ್ಯಕರ 'ರಾಜಕೀಯ ಚಿಂತನೆ'ಯನ್ನು 'ದಿ ಗ್ರೇಟ್ ಡಿಕ್ಟೇಟರ್ ಮತ್ತೊಮ್ಮೆ ನೋಡಿದಾಗ' ಕವನ ವ್ಯಕ್ತಪಡಿಸಿದೆ. 'ಮಾತುಗಳು ಏನನ್ನೂ ಹೇಳಲಾರವು' ಕಾವ್ಯ ಸ್ವರೂಪವನ್ನು ಗಂಭೀರವಾಗಿ ಚಿಂತಿಸುವ ಕವನ, ಇತ್ತೀಚೆಗೆ ಬಂದ ಉತ್ತಮ ಕವನ ಸಂಕಲನಗಳಲ್ಲಿ 'ನಿಜದ ನೆಲೆ' ಸಹ ಒಂದು.
©2024 Book Brahma Private Limited.