ಬಾಳು

Author : ಜಿ. ಎಚ್. ನಾಯಕ

Pages 674

₹ 675.00




Year of Publication: 2015
Published by: ರಾಘವೇಂದ್ರ ಪ್ರಕಾಶನ
Address: ಅಂಕೋಲಾ

Synopsys

ವಿಮರ್ಶಕ ಜಿ.ಎಚ್. ನಾಯಕರು ತಮ್ಮ ಖಚಿತ ನಿಲುವು ಹಾಗೂ ಅದರ ಮಂಡನೆಗೆ ಹೆಸರಾದವರು. ಮೈಸೂರು ವಿ.ವಿ.ಯಲ್ಲಿ ಕನ್ನಡ ಅಧ್ಯಾಪಕರಾಗಿದ್ದ ನಾಯಕರು ನಿವೃತ್ತಿಯ ನಂತರ ಮೈಸೂರಿನಲ್ಲಿ ವಾಸಿಸುತ್ತಿದ್ದಾರೆ. ಅವರ ಆತ್ಮಕತೆ ಈ ಗ್ರಂಥ. ನಾಯಕರ ಬಾಲ್ಯದ ನೆನಪುಗಳು ಹಾಗೂ ಅವರು ಸವೆಸಿದ ಹಾದಿಯನ್ನು ಈ ಕೃತಿಯು ಸೊಗಸಾಗಿ ಕಟ್ಟಿಕೊಡುತ್ತದೆ. ನೇರ-ನಿರ್ಭಿಡೆಯ ನಾಯಕರ ವ್ಯಕ್ತಿತ್ವ ಈ ಗ್ರಂಥದಲ್ಲಿ ಅನಾವರಣಗೊಂಡಿದೆ.

 

About the Author

ಜಿ. ಎಚ್. ನಾಯಕ
(18 September 1935 - 26 May 2023)

’ಜಿ.ಎಚ್. ನಾಯಕ’ ಎಂದು ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಿರುವ ವಿಮರ್ಶಕ ಗೋವಿಂದರಾಯ ಹಮ್ಮಣ್ಣ ನಾಯಕ ಅವರು ಜನಿಸಿದ್ದು 1935ರ ಸೆಪ್ಟೆಂಬರ್ 18ರಂದು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಸೂರ್ವೆ ಗ್ರಾಮದವರು. ಮೈಸೂರಿನ ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರು. ಹಂಪಿಯ ಕನ್ನಡ ವಿಶ್ವವಿದ್ಯಾಲಯ (1994-95) ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕಾವ್ಯಾಧ್ಯಯನ ಪೀಠ (1996-97)ಗಳ ಸಂದರ್ಶಕ ಪ್ರಾಧ್ಯಾಪಕರೂ ಆಗಿದ್ದರು. ಸಮಕಾಲೀನ (1973), ಅನಿವಾರ್ಯ (1980), ನಿರಪೇಕ್ಷ (1984), ನಿಜದನಿ (1988), ಸಕಾಲಿಕ (1995), ಗುಣಗೌರವ (2002), ಹರಿಶ್ಚಂದ್ರ ಕಾವ್ಯ ಓದು-ವಿಮರ್ಶೆ (2002), ದಲಿತ ಹೋರಾಟ: ಗಂಭೀರ ...

READ MORE

Related Books