ಅಮೆರಿಕದ 16ನೆಯ ರಾಷ್ಟ್ರಾಧ್ಯಕ್ಷ ಅಬ್ರಹಾಂ ಲಿಂಕನ್ ವಿಶ್ವದ ಮಹಾ ಮುತ್ಸದ್ದಿಗಳ, ಸರ್ವಸಮತಾವಾದಿ ನಾಯಕರ ಹಾಗೂ ಅತ್ಯಂತ ಪ್ರಭಾವೀ ವಾಕ್ಷಟುಗಳ ಸಾಲಿನಲ್ಲಿ ನಿಂತ ನಾಯಕ. ಒಬ್ಬ ಸಹೃದಯವನ್ನು ಹೊಂದಿದ ನಾಯಕ, ಶೋಷಿತರ ಕಣ್ಮಣಿ. ಹಾಗೆಯೇ ಅವರು ತನ್ನ ಮಕ್ಕಳಿಗೆ ಒಳ್ಳೆಯ ತಂದೆಯೂ ಆಗಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಅವರು ಒಳ್ಳೆಯ ಕವಿಯೂ ಆಗಿದರು. ಅವರ ಮಾತುಗಾರಿಕೆಯಲ್ಲೇ ಕಾವ್ಯದ ಲಯವಿದೆ. ಹಾಗೆಯೇ ಅವರು ತನ್ನ ಮಕ್ಕಳಿಗೆ ಬರೆದ ಪತ್ರಗಳು ಆ ಕಾವ್ಯ ಗುಣವನ್ನು ನಾವು ಕಾಣಬಹುದು. ರಾಜಕೀಯ ನಾಯಕನ ಮರೆಯೊಳಗೆ ಬಚ್ಚಿಟ್ಟುಕೊಂಡ ಆ ಅಜ್ಞಾತ ಕವಿಯ ಮೂರು ದೀರ್ಘ ಕವನಗಳನ್ನು ಕನ್ನಡದ ಮಾನವ್ಯ ಕವಿ ಬಿ. ಎ. ಸನದಿಯವರು ಕನ್ನಡಕ್ಕಿಳಿಸಿದ್ದಾರೆ. ಇವುಗಳು ಕವಿಯ ಜೀವನ ದರ್ಶನದ ಗಾಢತೆಯನ್ನು ಸೂಚಿಸುತ್ತದೆ. ಒಬ್ಬ ರಾಜಕೀಯ ನಾಯಕನ ಆಳದಲ್ಲಿ ಇಂತಹದೊಂದು ಜೀವನ ದರ್ಶನದ ತೊರೆ ಹರಿಯುತ್ತಿತ್ತೇ ಎಂದು ಅಚ್ಚರಿ ಪಡುವಂತಹ ಸಾಲುಗಳು ಈ ಕೃತಿಯಲ್ಲಿವೆ.
©2024 Book Brahma Private Limited.