‘ಕುಲುಮೆಯೊಳಗಿನ ಚಿಲುಮೆ’ ಸಿ.ನಾಗಣ್ಣ ಅವರು ಅನುವಾದಿಸಿರುವ ಆಫ್ರಿಕಾ ಕವಿತೆಗಳ ಕನ್ನಡಾನುವಾದ. ಈ ಕೃತಿಗೆ ಹಿರಿಯ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಮುನ್ನುಡಿ ಬರೆದು ‘ವಿಶ್ವಸಾಹಿತ್ಯವನ್ನು ಇಂಗ್ಲಿಷ್ ಮೂಲಕ ಸಮರ್ಥವಾಗಿ ಅರಗಿಸಿಕೊಂಡಿರುವ ಕೆಲವೇ ಕನ್ನಡ ವಿದ್ವಾಂಸರಲ್ಲಿ ನಾಗಣ್ಣ ಒಬ್ಬರು ಎಂಬುದು ನನ್ನ ಧೃಡವಾದ ನಂಬಿಕೆ. ಜೊತೆಗೆ ಚಿನು ಅಚಿಬೆಯ ‘ಥಿಂಗ್ಸ್ ಫಾಲ್ ಅಪಾರ್ಟ್ ’ ಕಾದಂಬರಿಯನ್ನು ಕನ್ನಡಕ್ಕೆ ತಂದು ಅಚಿಬೆಯನ್ನು ನಮ್ಮವನನ್ನಾಗಿಸಿದ್ದಾರೆ. ಈಗ ಆಫ್ರಿಕಾದ ಕವಿತೆಗಳನ್ನು ಕನ್ನಡದ ಲಯಕ್ಕೆ ಒಗ್ಗಿಸಿ ಅನ್ಯಧನಿಯ ಆಮದಿನಿಂದ ನಮ್ಮ ಪಾತ್ರ ಕಾವ್ಯದ ಪಾತ್ರ ಹಿಗ್ಗುವ ಪರಿಯನ್ನು ತೋರಿಸಿದ್ದಾರೆ. ಇಂಥಾ ಪ್ರಕ್ರಿಯೆ ಜಾಗೃತವಾಗಿರುವವರೆಗೆ ಸೃಜನಶೀಲತೆಗೆ ಆಲಸ್ಯ ಉಂಟಾಗದು. ಅಜಡವಾದದ್ದನ್ನು ಒಲಿಸಿಕೊಳ್ಳುವುದೇ ಕಲ್ಪನೀಯ ಅನವರತದ ಕೆಲಸವಾಗಿದೆ ಪ್ರತಿಭಟನೆಯ ಕುಲುಮೆಯಲ್ಲಿ ಚೈತನ್ಯದ ಕಿಡಿಗಳನ್ನು ಹಿಡಿದಿಟ್ಟಿರುವ ನಾಗಣ್ಣ ಅಭಿನಂದನಾರ್ಹರಾಗಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
ಈ ಕೃತಿಯಲ್ಲಿ, ಗುಲಾಮರಿಲ್ಲದ ನಾಡಿನಲ್ಲಿ, ಗುಲಾಮಗಿರಿ, ಗಣಿಯಿಂದ ಬಂದವ, ಆಳುವವರ ನಾಡು, ರಾತ್ರಿ, ದುಷ್ಟಾಂತ, ಮಕ್ಕಳಿಲ್ಲದವರಿಗೆ, ಹಸಿವಿನ ಮುಖ, ಉಯ್ಯಾಲೆಯಲ್ಲಿ ಕುಳಿತ ಹುಡುಗ, ತರುಣರನ್ನು ಕಾಣುವಾಗ, ಕಾಲ, ಇದು ನಿಜವಾದರೆ, ಷಂಡನ ಸಮಾಧಾನ, ಪಾಶ್ಚಾತ್ಯ ನಾಗರಿಕತೆ, ಯೆರೂಬಾದ ಜಾನಪದ ಹಾಡು, ಮೊದಲ ನೆರೆ, ನಿನಗೆ ವಂದನೆ ದೇವ, ಎಚ್ಚರ, ಮರಳಿ ಮನೆಗೆ, ಕಪ್ಪು ವ್ಯಕ್ತಿಯ ತೀರ್ಪು, ಪ್ರೇಮ ಕವನ, ಉಸಿರು, ಸೆಟೆದು ನಿಲ್ಲು ಬಲದ ಎದುರು, ಎಲ್ಲಾ ಕಳಕೊಂಡವನು ಸೇರಿದಂತೆ 61 ಕವಿತೆಗಳು ಸಂಕಲನಗೊಂಡಿವೆ.
©2024 Book Brahma Private Limited.