ಶಾಂತಿ ನಾಯಕರು ಜಾನಪದಕ್ಕೆ ಸಂಬಂಧಿಸಿ ಅದರೊಳಗೆ ನಾವು ಮಾಡಬೇಕಾದ ಅಧ್ಯಯನದ ಬಗ್ಗೆ ವಿಶೇಷ ಗಮನ ಸೆಳೆಯುತ್ತಾರೆ. ಜಾನಪದ ಎಷ್ಟು ಸೂಕ್ಷ್ಮ ಅನ್ನುವುದನ್ನು ತೋರಿಸಿದ್ದಾರೆ. ನಾಡವರ ಬಳಿ ಪದ್ಧತಿಯ ಬಗ್ಗೆ ಕಿರು ಅಧ್ಯಯನವನ್ನು ನೀಡುತ್ತ ಜನಪದರ ಬನಪದರ ಬಳಿ ಪದ್ಧತಿಯ ಮಹತ್ತ್ವವನ್ನು ತೆರೆದಿಟ್ಟಿದ್ದಾರೆ. ಇಲ್ಲಿ ಜಾನಪದದ ಅಧಿಕೃತ ವಕ್ತೃವಾಗಿ ಶಾಂತಿ ನಾಯಕರು ಜಾನಪದ ಲೋಕಕ್ಕೆ ಸಲ್ಲುತ್ತಾರೆ. ಜಾನಪದದ ಅವರ ಮನವರಿಕೆ ತಲಸ್ಪರ್ಶಿಯಾದುದು ಎಂಬುದಕ್ಕೆ ಈ ಮೌಲ್ಯಯುತ ಲೇಖನಗಳು ಸ್ಪಷ್ಟ ಪುರಾವೆಯಾಗುತ್ತವೆ ಎಂದು ಸುಮುಖಾನಂದ ಜಲವಳ್ಳಿ ಅವರು ಬೆನ್ನುಡಿಯಲ್ಲಿ ಬರೆದಿದ್ದಾರೆ.
©2025 Book Brahma Private Limited.