ಸಾಹಿತ್ಯದ ತಾಯಿ ಬೇರು ಜನಪದ ಸಾಹಿತ್ಯ. ಪ್ರಸ್ತುತ ಜನಪದ ಸಾಹಿತ್ಯದಲ್ಲಿ ತವರುಮನೆ ಕೃತಿಯಲ್ಲಿ ಮುಮ್ತಾಜ್ ಬೇಗಂ ಅವರು ಜನಪದ ಸಾಹಿತ್ಯದಲ್ಲಿ ಸಾಮಾಜಿಕ ಚಿತ್ರಗಳು ಮತ್ತು ಸಾಂಸ್ಕೃತಿಕ ಮೌಲ್ಯಗಳು ಗತಕಾಲದ ಸಂಗತಿಗಳಾದರೂ ಇಂದಿನ ವರ್ತಮಾನಕ್ಕೆ ಮುಖಾಮುಖಿಯಾಗಿಸುವ ಪ್ರಯತ್ನವನ್ನು ಮಾಡಿದ್ದಾರೆ. ಜನಪದ ಸಾಹಿತ್ಯದಲ್ಲಿ ಹೆಣ್ಣುಮಗಳು ತನ್ನ ಬದುಕಿನ ಜೀವನ ಅನುಭವನಗಳನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದಾಳೆ. ಪುರುಷ ಪ್ರಧಾನ ವ್ಯವಸ್ಥೆಯ ವಾಹಕರಾದ ಪುರಾಣಕಾರರು, ಕೀರ್ತನಕಾರರು, ಕತೆ, ಉಪಕತೆಗಳ ಮೂಲಕ ಹೆಣ್ಣನ್ನು ಕೀಳಾಗಿ ಚಿತ್ರಿಸುವ ಮೂಲಕ ತಾಯ್ತನವನ್ನು ವೈಭವಿಕರಿಸಿದ್ದಾರೆ. ಇಂತಹ ಹಲವಾರು ವಿಷಯಗಳ ಬಗ್ಗೆ ವಿಶ್ಲೇಷಣೆಯನ್ನು ಈ ಕೃತಿಯಲ್ಲಿ ಮಾಡಲಾಗಿದೆ.
©2024 Book Brahma Private Limited.