ಕವಿ ಸಂಗಮೇಶ ತಮ್ಮನಗೌಡ್ರ ಅವರು ಬರೆದ ಕೃತಿ-ಹೆಸರು ಹೇಳಬೇಕ್ರಿ ನೀವು ಒಡಪಿಟ್ಟು. ತಮ್ಮೂರಿನ ಸುತ್ತಮುತ್ತ ಪ್ರಚಲಿತವಿರುವ ಒಗಟು ಹಾಗೂ ಒಡಪುಗಳನ್ನು ಸಂಗ್ರಹಿಸಿದ ಕೃತಿ. 1990 ರಿಂದ ಈವರೆಗೆ 4 ಆವೃತ್ತಿಗಳನ್ನು ಕಂಡಿದೆ. ಜನಪದ ಸಾಹಿತ್ಯದ ಉಸಿರು ಅಡಗಿರುವುದು ಹಳ್ಳಿಯಲ್ಲಿ. ಕುಟ್ಟುವುದು, ಬೀಸುವುದು, ಸೋಬಾನೆ ಪದಗಳು ಹೀಗೆ ಇವುಗಳ ಸಂಗ್ರಹ ಕಾರ್ಯ ನಡೆದಿದ್ದರೂ ಅಸಂಖ್ಯ ರೀತಿಯಲ್ಲಿ ಮತ್ತೆ ಮತ್ತೆ ಹೊಸ ಹೊಸ ಹಾಡುಗಳು-ಸಾಹಿತ್ಯ ಸಂಗ್ರಹವಾಗುತ್ತಲೇ ಇದೆ. ಜನಪದ ಸಾಹಿತ್ಯದ ಹಾಗೂ ಎಂದೂ ಬತ್ತದ ಒರತೆ. ಜನಪದ ಸಾಹಿತ್ಯದ ಸಂಗ್ರಹದ ಭಾಗವಾಗಿ ತಾವೂ ಕೆಲಸ ಮಾಡಬೇಕು ಎಂಬ ಹಂಬಲದೊಂದಿಗೆ ಈ ಕೃತಿ ರಚಿಸಿದ್ದಾಗಿ ಲೇಖಕರು ಹೇಳಿದ್ದಾರೆ.
©2024 Book Brahma Private Limited.