ಈ ಕಿರುಪುಸ್ತಕದಲ್ಲಿ ಬಂಡಾಯವೆಂಬುದು ಒಂದು ಮನೋಧರ್ಮ, ಜಾನಪದವು ಜಗತ್ತಿನ ಜನ ಸಮುದಾಯಗಳ ಬಗೆಗೆ ಮಾತನಾಡಿದರೆ, ಬಂಡಾಯವು ಜನಸಮುದಾಯಗಳ ಮನೋಧರ್ಮದ ಬಗ್ಗೆ ಮಾತನಾಡುತ್ತದೆ ಎಂಬುದು ಒಂದು ವಾದ. ಸಂಪ್ರದಾಯದ ತಳಹದಿಯ ಮೇಲೆ ಬೆಳೆದ ಜಾನಪದದಲ್ಲಿ ಬಂಡಾಯ ಇರುವುದು ಹೇಗೆ ಎಂಬ ಇನ್ನೊಂದು ವಾದಕ್ಕೆ ಉತ್ತರವಾಗಿ ಜಾನಪದವನ್ನು ಆಳವಾಗಿ ಅಧ್ಯಯನ ಮಾಡಿ, ಜಾನಪದದ ಒಳವಿನ್ಯಾಸಗಳಲ್ಲಿ ಬಂಡಾಯದ ಬೀಜಗಳು ಮೊಳಕೆಯೊಡೆದಿರುವುದನ್ನು ಸ್ಕೂಲವಾಗಿ ವಿಶ್ಲೇಷಿಸಲಾಗಿದೆ.
©2025 Book Brahma Private Limited.