ದಾವಣಗೆರೆಯ ಡಿ.ಆರ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಪರಾಗಿದ್ದ ’ಡಾ.ಎಂ.ಜಿ ಈಶ್ವರಪ್ಪ’ ನವರು ನಿರರ್ಗಳ ಮಾತುಗಾರಿಕೆಗೆ ಹೆಸರಾದವರು. ಇವರು ಜಾನಪದ ಕ್ಷೇತ್ರದ ಖ್ಯಾತ ವಿದ್ವಾಂಸರು, ವಿಮರ್ಶಕರು. ಇವರು ಬರೆದ “ಜಾನಪದ ಇಬ್ಬನಿಗಳು” ಎಂಬುದು ಜಾನಪದದ ಕುರಿತು ಇರುವ ಒಟ್ಟು 12 ಲೇಖನಗಳ ಒಂದು ಗುಚ್ವವಾಗಿದೆ. ಈ ದೇಶದ ಅವಿಭಾಜ್ಯ ಅಂಗ, ದೇಶದ ಬೆನ್ನುಲುಬು ಎಂದು ನಾವು ಕರೆಯುವ ರೈತರೂ ದಿನನಿತ್ಯದ ಜೀವನದಲ್ಲಿ ಅನುಭವಿಸುವ ಕಷ್ಟಗಳು , ರೈತರನ್ನು ತನ್ನತನವನ್ನು ಕಳೆದುಕೊಳ್ಳುವುದರ ಬಗ್ಗೆ , ಜೀವನವನ್ನು ಪೋಷಣೆ ಮಾಡುವಂತಹ ಕೆಲವು ಸತ್ವಗಳು , ಪ್ರಸ್ತುತ ಆಧುನಿಕ ಲೋಕಕ್ಕೆ ಆಧಾರಪೂರಕವಾಗಿರುವ ವಿಷಯಗಳ ಬಗ್ಗೆ ವಿವರಗಳನ್ನು ಈ ಕೃತಿಯೂ ಒದಗಿಸುತ್ತದೆ.
©2024 Book Brahma Private Limited.