ಬಾಯಿಂದ ಬಾಯಿಗೆ ಪಸರಿಸುತ್ತಿದ್ದ ಜನಪದ ಜ್ಞಾನ ಜಗತ್ತಿನ ಹೆಮ್ಮೆ ಕೂಡ. ಹೀಗೆ ಮೌಖಿಕವಾಗಿ ಹರಡಿಕೊಂಡ ಸಾಹಿತ್ಯ ಕರಳು ಬಳ್ಳಿ ಸಂಬಂಧಕ್ಕೆ ಒತ್ತು ನೀಡುತ್ತದೆ ಎಂಬುದು ಮಹತ್ವದ ಸಂಗತಿ. ಜನಪದ ಸಾಹಿತ್ಯದಲ್ಲಿ ತಾಯಿಯ ಪರಿಕಲ್ಪನೆ ಹೇಗಿದೆ ಎಂದು ಪರಿಚಯಿಸುವ ಯತ್ನ ಚಂದ್ರಶೇಖೇ ವಸ್ತ್ರದ ಅವರದು. ಹಾಗೆಂದೇ ಅವರು ಜನಪದ ತ್ರಿಪದಿ, ಕಥನ ಕವನ, ಖಂಡಕಾವ್ಯ, ಕತೆಗಳಲ್ಲಿ ಅವ್ವ ಹೇಗೆ ಮೂಡಿಬಂದಿದ್ದಾಳೆ ಎಂಬುದನ್ನು ವಿವರಿಸಿದ್ದಾರೆ. ಅವ್ವ’ಮನೆ ಮಾಡಿರುವ’ ಸೋಬಾನೆ, ಲಾವಣಿ, ಜೋಗುಳ, ಗೀಗಿಪದ, ಕೋಲಾಟ, ಹಂತಿಪದಗಳನ್ನು ಸಂಪಾದಿಸಿದ್ದಾರೆ. ಅಲ್ಲದೆ ಕನ್ನಡ, ತುಳು, ಮಲಯಾಳಂ, ತೆಲುಗು ಜನಪದ ಕತೆಗಳಲ್ಲಿ ತಾಯಿಯನ್ನು ಚಿತ್ರಿಸಿರುವ ಪರಿಯನ್ನು ವರ್ಣಿಸಲಾಗಿದೆ.
ತಮ್ಮ ತಾಯಿಯ ನೆನಪಿನಲ್ಲಿ ಕೃತಿಯನ್ನು ಹೊರತಂದಿರುವ ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ’ಕುರಿತು ಓದದೆಯೂ ಕಾವ್ಯ ಪ್ರಯೋಗ ಪರಿಣತಿಮತಿಗಳಾದ ನಮ್ಮ ಜನಪದರ ಬದುಕೇ ಒಂದು ಸುಂದರ ಹಾಡು. ಅವರ ಜೀವನ ನೀರಿನಷ್ಟು ಪವಿತ್ರ., ಗಾಳಿಯಷ್ಟು ಪಾರದರ್ಶಕ, ಗಗನದಷ್ಟು ಎತ್ತರ, ಸಾಗರದಷ್ಟು ಆಳ, ಅಗಲ. ಎಲ್ಲ ಸೃಜನಶೀಲ ಸಾಹಿತ್ಯದ ತಾಯಿಬೇರಾದ ಈ nಡಿಗರ ನುಡಿ, ಬದುಕನ್ನೇ ಭಟ್ಟಿಯಿಳಿಸಿದ ಸಾರ. ಆ ಮಹಾಬದುಕಿನ ಮೂಲಸತ್ವವಾದ ’ತಾಯಿ’ಯ ಕುರಿತ ಸಾಹಿತ್ಯ ರಾಶಿಯನ್ನು ಚಂದ್ರಶೇಖರ ವಸ್ತ್ರದ ಅವರು ಸಂಕಲಿಸಿಕೊಟ್ಟಿದ್ದಾರೆ’ ಎಂದು ನೆನೆದಿದ್ದಾರೆ.
©2024 Book Brahma Private Limited.